ಜಿಲ್ಲೆ

18ರಂದು ಜೋಡಿ ಕಟ್ಟುವ ಕಾರ್ಯ

reportermys


ಮೈಸೂರು:
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ನಾಡಕುಸ್ತಿ’ ಪಂದ್ಯಾವಳಿಗೆ ಸೆ.18ರಂದು ವಸ್ತುಪ್ರದರ್ಶನ ಆವರಣದ ಬಿ.ವಿ.ಕಾರಂತ ರಂಗಮಂದಿರದಲ್ಲಿ ಜೋಡಿ ಕಟ್ಟುವ ಕಾರ್ಯ ನಡೆಯಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ನಾಡಿನ ಗಂಡು ಕಲೆ ನಾಡಕುಸ್ತಿ ಪಂದ್ಯಾವಳಿಯನ್ನು ಎಂದಿನಂತೆ ಆಯೋಜಿ ಪೈಲ್ವಾನರನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕುಸ್ತಿ ಪರಂಪರೆ ಉಳಿಸಿ ಬೆಳೆಸಲು ಸರ್ಕಾರ ಮುಂದಾಗಿದೆ. ಸೆ.26ರಿಂದ ಅ.2ರವರೆಗೆ ಒಟ್ಟು 7 ದಿನಗಳ ಕಾಲ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ.


ಈ ಸಂಬಂಧ 18ರಂದು ಬೆಳಗ್ಗೆ 10 ಗಂಟೆಗೆ ಜೋಡಿ ಕಟ್ಟುವ ಪ್ರಕ್ರಿಯೆ ಆರಂಭವಾಗಲಿದೆ. ಆದ್ದರಿಂದ ದಸರಾ ನಾಡಕುಸ್ತಿಯಲ್ಲಿ ಭಾಗಿಯಾಗಲು ಇಚ್ಛಿಸುವ ಎಲ್ಲ ಕುಸ್ತಿಪಟುಗಳು ಅಂದು ನಿಗದಿತ ಸಮಯಕ್ಕೆ ತಮ್ಮ ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ವರ್ಣ ಭಾವಚಿತ್ರ ಮತ್ತು ಕುಸ್ತಿ ಸಮವಸ್ತ್ರದಲ್ಲಿರುವ 2 ಭಾವಚಿತ್ರದೊಂದಿಗೆ ಭಾಗವಹಿಸಬೇಕು. ಈ ಪೈಕಿ ಸೂಕ್ತ ಕುಸ್ತಿಪಟುಗಳ ಜೋಡಿಯನ್ನು ಕಟ್ಟಲಾಗುತ್ತದೆ. ಜೋಡಿ ಕಟ್ಟುವ ಕಾರ್ಯದಲ್ಲಿ ಭಾಗಿಯಾಗುವ ಎಲ್ಲ ಕುಸ್ತಿಪಟುಗಳು ತಪ್ಪದೇ ನಿಗದಿತ ಅರ್ಜಿಯನ್ನು ಭರ್ತಿ ಮಾಡುವುದರ ಜತೆಗೆ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ಕುಸ್ತಿ ಉಪ ಸಮಿತಿಯ ಕಾರ್ಯದರ್ಶಿ ಎಸ್.ಜೆ. ಹರ್ಷವರ್ಧನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.