ಜಿಲ್ಲೆ

ದ ಮಾಸ್ಟರ್ಸ್ ದ ಮಾಡರ್ನ್’ ಚಿತ್ರಕಲಾ ಪ್ರದರ್ಶನ ಮಾ. 31ರವರೆಗೆ ಆಯೋಜನೆ

ಪಂಕಜ ಕೆ.ಎಂ.

ಬೆಂಗಳೂರು: ದಕ್ಷಿಣ ಭಾರತದ ಕಲೆಯ ಐತಿಹ್ಯ ಪರಿಚಯಿಸುವ ‘ದ ಮಾಸ್ಟರ್ಸ್ ದ ಮಾಡರ್ನ್’ ಸೌತ್ ಎಡಿಷನ್ ಚಿತ್ರಕಲಾ ಪ್ರದರ್ಶನವು ಲ್ಯಾವೆಲ್ಲೆ ರಸ್ತೆಯ 7ನೇ ಕ್ರಾಸ್‌ನಲ್ಲಿರುವ ‘ಮೈನೀ ಸದನ್‌ನ ಗ್ಯಾಲರಿ ಎ’ನಲ್ಲಿ ಆರಂಭವಾಗಿದ್ದು, ಮಾ.31ರವರೆಗೆ ನಡೆಯಲಿದೆ.

ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕಲಾಕೃತಿಗಳು ಪ್ರದರ್ಶನದಲ್ಲಿವೆ. ತಂಜಾವೂರ್ ಮತ್ತು ಮೈಸೂರು ಶೈಲಿಯ ನವೀನ ಕಲಾಕೃತಿಗಳು ವಿಶೇಷ ಆಕರ್ಷಣೆಗಳಾಗಿಛಿ. ಇವು ತಮ್ಮ ವಿಶಿಷ್ಟ ವಿನ್ಯಾಸಗಳು ಮತ್ತು ಚಿನ್ನದ ಕಸೂತಿಗಳಿಗಾಗಿ ಪ್ರಸಿದ್ಧಿ ಪಡೆದಿವೆ. ಈ ಪ್ರದರ್ಶನವು ದೇವಾಲಯ ಶಿಲ್ಪಗಳಿಂದ ಪ್ರಭಾವಿತವಾದ ಆಧುನಿಕ ಕಲಾಕೃತಿಗಳನ್ನು ಹಾಗೂ 20ನೇ ಶತಮಾನದ ಪ್ರಾರಂಭದ ಯುರೋಪಿಯನ್ ತಂತ್ರಗಳನ್ನು ಒಳಗೊಂಡಿವೆ. ಕೆ.ಎಂ. ಅಡಿಮೂಲಂ, ಕೆ.ಕೆ. ಹೆಬ್ಬಾರ್, ಎಸ್.ಜಿ. ವಾಸುದೇವ್ ಸೇರಿ ಹಿರಿಯ ಕಲಾವಿದರ ಕಲೆ ಜತೆಗೆ ಡಿಜಿಟಲ್ ಕಲೆ ಮತ್ತು ಹೊಸ ಮಾಧ್ಯಮ ಬಳಸುವ ಉದಯೋನ್ಮುಖ ಕಲಾವಿದರು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಪ್ರದರ್ಶನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.