ಜಿಲ್ಲೆ

ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಶಾಂತೇಶ ಎಜುಕೇಶನ್​ ಸೊಸೈಟಿಯ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಎಲ್​ಕೆಜಿಯಿಂದ 8ನೇತರಗತಿ ವರೆಗಿನ ಮಕ್ಕಳಿಗೆ ಶನಿವಾರ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಶಿಕ್ಷಣ ಸಂಯೋಜಕ ಶ್ರೀನಿವಾಸ ಸವಣೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೇಂಟಿಂಗ್​ ವಿಷಯ ಕುರಿತು ಆಕಾಶವಾಣಿ ನಿವೃತ್ತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಪಾಲಕರೊಂದಿಗೆ ಸಂವಾದ ನಡೆಸಿದರು.

4 ವಿಭಾಗಗಳಲ್ಲಿ ಒಟ್ಟು 1278 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಯುವ ಚಿತ್ರ ಕಲಾವಿದ ಮಹೇಶ ಉಮ್ತಾರ, ಸಂತೋಷ ನಿರ್ಣಾಯಕರಾಗಿ ಆಗಮಿಸಿದ್ದರು. ಶಾಂತೇಶ ಎಜುಕೇಶನ್​ ಸೊಸೈಟಿ ಅಧ್ಯಕ್ಷ ಪ್ರೊ. ಪ್ರಹ್ಲಾದ್​ ಹಂಚಿನಮನಿ, ಕಾರ್ಯದರ್ಶಿ ಮನೋಜ ಹಂಚಿನಮನಿ, ಸಹಕಾರ್ಯದರ್ಶಿ ವರ್ಷಾ ಹಂಚಿನಮನಿ ಇತರರು ಇದ್ದರು.

ವಿದ್ವಾನ್​ ನವೀನ್​ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ಹಾಗೂ ವಾಣಿ ಕುಲಕರ್ಣಿ ನಿರೂಪಿಸಿದರು.