Shivasharane Hemaraddi Mallamma Jayanti 
ಜಿಲ್ಲೆ

ಇಂದಿನಿಂದ ಚಿತ್ರ, ಶಿಲ್ಪಕಲಾ ಪ್ರದರ್ಶನ

ಗಿರೀಶ ಸಗರ

ವಿಜಯಪುರ: ಇಲ್ಲಿನ ಸಿದ್ಧಲಿಂಗ ಫೈನ್​ ಆರ್ಟ್​ ಸೊಸೈಟಿ ವತಿಯಿಂದ ಕಲಾವಿದ ದಿ. ಡಾ. ಸಿ.ಬಿ. ಕಾಚಾಪುರ ಅವರ 13ನೇ ಪುಣ್ಯಸ್ಪರಣೆ ಅಂಗವಾಗಿ ಮಾ. 13 ರಿಂದ ಮಾ. 15 ರ ವರೆಗೆ ನಗರದ ಸ್ಟೇಶನ್​ ರಸ್ತೆಯಲ್ಲಿನ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್​ ಗ್ಯಾಲರಿಯಲ್ಲಿ ಚಿತ್ರ ಮತ್ತು ಶಿಲ್ಪಕಲಾ ಪ್ರದರ್ಶನ ನಡೆಯಲಿದೆ.

ಮಾ. 13 ರಂದು ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ನೆರವೇರಿಸಲಿದ್ದಾರೆ.

ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ, ಅತಿಥಿಗಳಾಗಿ ಹಿರಿಯ ಕಲಾವಿದ ಬಿ.ಎಸ್​. ಬೂಸಗೊಂಡ ಹಾಗೂ ಸೊಸೈಟಿಯ ಕಾರ್ಯದರ್ಶಿ ಲಿಂಗರಾಜ ಕಾಚಾಪುರ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.