ಉಡುಪಿ: ಕಾಂಗ್ರೆಸ್ ದೇಶ ವಿಭಜನೆಯಿಂದ ನಮಗೆ ಪಾಕ್ ಮತ್ತು ಭಯೋತ್ಪಾದನೆ ಉಡುಗೊರೆಯಾಗಿ ಸಿಕ್ಕಿದೆ. 370 ವಿಧಿ ರದ್ದತಿ ಬಳಿಕ ಕಡಿಮೆಯಾಗಿದ್ದ ಭಯೋತ್ಪಾದನಾ ಚಟುವಟಿಕೆ ಮತ್ತೆ ಗರಿಗೆದರಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿ ಮುಖಂಡೆ ಪೂರ್ಣಿಮಾ ಸುರೇಶ್ ಹೇಳಿದರು.
ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದು ಜಾಗರಣ ವೇದಿಕೆ -ವತಿಯಿಂದ ಕಾಶ್ಮೀರದ ಪಹಲ್ಗಾಮ್ ನರಮೇಧ ಖಂಡಸಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಕಾಶ್ಮೀರದ ಶೇ.90ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತಿದೆ. ಕಾಶ್ಮೀರಿಗಳು ಹೊಟ್ಟೆಪಾಡಿಗಾಗಿ ಟನೆ ಖಂಡಿಸುವ ನಾಟಕವಾಡುತ್ತಿದ್ದಾರೆ. ಸ್ಥಳಿಯರ ಬೆಂಬಲವಿಲ್ಲದೆ ಇಷ್ಟು ದೊಡ್ಡ ಮಟ್ಟದ ದಾಳಿ ಅಸಾಧ್ಯ. ಭಯೋತ್ಪಾದಕರು ಪ್ರವಾಸಿಗರನ್ನು ಕೊಲ್ಲುವಾಗ ಪಕ್ಷ, ಜಾತಿ, ಭಾಷೆಯನ್ನು ಪ್ರಶ್ನಿಸಿಲ್ಲ. ಧರ್ಮ ಮತ್ತು ಹೆಸರು ಕೇಳಿ ಹಿಂದುಗಳ ನರಮೇಧ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಶಾಸಕ ರುಪತಿ ಭಟ್, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಅಜಯ್ ಶೆಟ್ಟಿ, ಪ್ರಮುಖರಾದ ಶ್ಯಾಮಲಾ ಕುಂದರ್, ಸುಮಿತ್ರಾ ನಾಯಕ್, ದಿನೇಶ್ ಮೆಂಡನ್, ಮಹೇಶ್ ಬೈಲೂರು, ಉದಯ ಕುಮಾರ್ ಶೆಟ್ಟಿ, ಅಂಡಾರು ದೇವಿ ಪ್ರಸಾದ್ ಶೆಟ್ಟಿ, ವಾಸುದೇವ ಭಟ್ ಪೆರಂಪಳ್ಳಿ, ಮೋಹನ್ ಭಟ್, ಶಶಾಂಕ್ ಶಿವತ್ತಾಯ ಮೊದಲಾದವರಿದ್ದರು. ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬೆಳಗಾವಿಯ ನಿಪ್ಪಾಣಿ ಶ್ರೀ ಮಹಾಕಾಳಿ ಸಂಸ್ಥಾನದ ಅರುಣಾನಂದ ಶ್ರೀ ಚಾಲನೆ ನೀಡಿದರು.