ನೆಲಮಂಗಲ : ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಪದ್ಮನಾಭ್ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.
ನಗರಸಭಾ ಕಾರ್ಯಾಲಯದಲ್ಲಿ ಬುಧವಾರ ಅಧ್ಯಕ್ಷ ಎನ್.ಗಣೇಶ್ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರು ಎರಡನೇ ಅವಧಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದರು. ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಪದ್ಮನಾಭ್ ಪ್ರಸಾದ್ ಮಾತನಾಡಿ, ನಗರಸಭೆಯಿಂದ ನಾಗರಿಕರಿಗೆ ಸಮರ್ಪಕ ಮೂಲಸೌಕರ್ಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಸೇವಾವಧಿಯಲ್ಲಿ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ಪಡೆದು ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಪದ್ಮನಾಭ್ ಪ್ರಸಾದ್ ಅವರನ್ನು ಅಧ್ಯಕ್ಷ, ಉಪಾಧ್ಯಕ್ಷ, ಸಮಿತಿ ಸದಸ್ಯರು, ನಗರಸಭೆ ಅಧಿಕಾರಿಗಳು ಹಾಗೂ ಮುಖಂಡರು ಸನ್ಮಾನಿಸಿದರು.
ಸದಸ್ಯರಾದ ನರಸಿಂಹಮೂರ್ತಿ, ಚೇತನ್, ಲೋಲಾಗಂಗಾಧರ್, ಭಾಗ್ಯಾ ನರಸಿಂಹಮೂರ್ತಿ, ಪುರುಷೋತ್ತಮ್, ಪೌರಾಯುಕ್ತ ಮನುಕುಮಾರ್, ಮುಖಂಡ ಕೆ.ಕೃಷ್ಣಪ್ಪ, ಮುನಿಯಪ್ಪ, ನರಸಿಂಹಮೂರ್ತಿ, ನಾಗರಾಜು, ವಸಂತ್, ನಾರಾಯಣ್ ರಾವ್, ಮೋಹನ್ ಕುಮಾರ್ ಇತರರು ಇದ್ದರು.