ಬೆಂಗಳೂರು: ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಸಿದ್ಧರಾದ ಪದ್ಮವಿಭೂಷಣ ಶ್ರೀ ರಾಮಭದ್ರಾಚಾರ್ಯ ಜಿ ಮಹಾರಾಜ್ ಅವರ ಶ್ರೀ ವಾಲ್ಮೀಕಿ ರಾಮಾಯಣ ಕಥಾ ಪ್ರವಚನ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಶ್ರೀರಾಮ ಪರಿವಾರ್ ದುರ್ಗಾ ಪೂಜಾ ಸಮಿತಿ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಶ್ರೀವಾಲ್ಮೀಕಿ ರಾಮಾಯಣ ಕಥಾ ಪ್ರವಚನ ಕಾರ್ಯಕ್ರಮವು ಜೂ.17ರವರೆಗೆ ಪ್ರತಿದಿನ ಮಧ್ಯಾಹ್ನ 3ರಿಂದ ಸಂಜೆ 6 ರವರೆಗೆ ನಡೆಯಲಿದೆ. ಚಿತ್ರಕೂಟದ ಜಗದ್ಗುರು ಶ್ರೀ ರಾಮ ಭದ್ರಾಚಾರ್ಯ ಜಿ ಮಹಾರಾಜರು ನಡೆಸಿಕೊಡುವ ಕಾರ್ಯಕ್ರಮಕ್ಕೆ ಸರ್ವರಿಗೂ ಉಚಿತ ಪ್ರವೇಶಾವಕಾಶವಿದೆ. ವಾಲ್ಮೀಕಿ ರಾಮಾಯಣದಲ್ಲಿ ಹೇಳಲಾದ ಒಂಬತ್ತು ದಿನಗಳ ದೈವಿಕ ಜ್ಞಾನ, ಭಕ್ತಿ ಮತ್ತು ಭಗವಾನ್ ರಾಮನ ಶಾಶ್ವತ ಲೀಲೆಯ ಆಳವಾದ ನಿರೂಪಣೆಗಾಗಿ ಈ ಪ್ರವಚನ ಏರ್ಪಡಿಸಿರುವುದಾಗಿ ಸಮಿತಿಯ ಅಧ್ಯಕ್ಷ ಮಿಥಿಲೇಶ್ ತಿವಾರಿ ಹಾಗೂ ಸಂಯೋಜನಕ ಅಜಯ್ ಪ್ರಕಾಶ್ ಪಾಂಡೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 8073190711 ಸಂಪರ್ಕಿಸಬಹುದು.
ಸಂಸ್ಕೃತ ವಿದ್ವಾಂಸರು, ಕವಿಗಳು ಮತ್ತು ಆಧ್ಯಾತ್ಮಿಕ ದಿಗ್ಗಜರಾಗಿರುವ ಜಗದ್ಗುರು ಶ್ರೀರಾಮ ಭದ್ರಾಚಾರ್ಯ ಜಿ ಮಹಾರಾಜರು ಚಿತ್ರಕೂಟದಲ್ಲಿರುವ ತಮ್ಮ ದತ್ತಿ ಸಂಸ್ಥೆಗಳ ಮೂಲಕ ಅಂಗವಿಕಲರಿಗಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ. ಅವರ ಪ್ರವಚನದಿಂದ ದೇಶಾದ್ಯಂತ ಹಲವರು ಪ್ರೇರೇಪಣೆಗೊಂಡ ಉದಾಹರಣೆಗಳಿವೆ.