ಸಿಂಧನೂರು: ಪ್ರಸಕ್ತ ವರ್ಷದಲ್ಲಿ ಅವಧಿಗೆ ಮೊದಲೇ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿ ಬಿಡಲಾಗುತ್ತಿದೆ. ಆದರೆ, ಭತ್ತ ನಾಟಿಗೆ ಇನ್ನೂ ಸಸಿಗಳೇ ಇಲ್ಲದಂತಾಗಿದೆ. ಕಳೆದ ತಿಂಗಳು ಸಸಿ ಮಡಿ ಹಾಕಿಕೊಂಡಿದ್ದು, 20 ದಿನಗಳ ನಂತರ ನಾಟಿ ಮಾಡಬಹುದಾಗಿದೆ.
ತಾಲೂಕಿನಲ್ಲಿ ಮುಂಗಾರು ಚುರುಕುಗೊಂಡಿದ್ದ ಮೇ ಕೊನೇ ವಾರದಿಂದ ಜೂನ್ ತಿಂಗಳ ಸಂಪೂರ್ಣ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಇದರಿಂದ ಟೇಲೆಂಡ್ ಭಾಗದಲ್ಲಿ ಈಗಾಗಲೇ ಬಿತ್ತನೆ ಮಾಡಿ ತಿಂಗಳ ಕಳೆಯುತ್ತಾ ಬಂದಿದ್ದು ಬೆಳೆ ಉತ್ತಮವಾಗಿ ಬೆಳವಣಿಗೆಯಾಗಿವೆ. ಇನ್ನೊಂದೆಡೆ ತುಂಗಭದ್ರಾ ಜಲಾಶಯಕ್ಕೆ ಜೂ.30 ವೇಳೆಗೆ 60 ಕ್ಕೂ ಹೆಚ್ಚು ಟಿಎಂಸಿ ನೀರು ಹರಿದು ಬಂದಿದೆ. ಈಗಾಗಲೇ ಜೂ.27 ಐಸಿಸಿ ಸಭೆಯ ನಿರ್ಣಯದಂತೆ ಜೂ.2 ರಿಂದಲೇ ನಾಲೆಗೆ ನೀರು ಹರಿಬಿಡಲಾಗಿದೆ.