ಜಿಲ್ಲೆ

ಲಯನ್ಸ್ ಪದಾಧಿಕಾರಿಗಳಿಂದ ಭತ್ತ ನಾಟಿ

ರಾಜಣ್ಣ

ಬೇಲೂರು: ಅರೇಹಳ್ಳಿ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ತಾಲೂಕಿನ ಶಿರಗುರ ಗ್ರಾಮದ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಕೃಷಿಯಲ್ಲಿ ತೊಡಗಿದ್ದ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು.


ಅರೇಹಳ್ಳಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಎನ್.ಸಂತೋಷ್ ಕುಮಾರ್ ಮಾತನಾಡಿ, ರೈತರು ಜಮೀನಿನಲ್ಲಿ ಉತ್ತು ಬಿತ್ತು ಬೆಳೆಯುವುದರಿಂದಲೇ ಇಂದು ನಾವೆಲ್ಲರೂ ಹೊಟ್ಟೆ ತುಂಬ ಊಟ ಮಾಡಿ ಆರಾಮವಾಗಿದ್ದೇವೆ. ಆದರೆ ಅವರು ಮಾತ್ರ ಜಮೀನುಗಳಲ್ಲಿ ಹಗಲು, ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯುತ್ತಾರೆ. ಈ ಹಿನ್ನೆಲೆಯಲ್ಲಿ ರೈತರಿಗೂ ಪ್ರೋತ್ಸಾಹ ಮತ್ತು ನಮಗೂ ಸಂತೋಷವಾಗಲಿ ಎಂಬ ಉದ್ದೇಶದಿಂದ ತಾಲೂಕಿನ ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಫೆಲಿಕ್ಸ್ ಡಿ.ಅಲ್ಮೆಡಾ ಅವರ ಜಮೀನಿನಲ್ಲಿ ನಮ್ಮ ಲಯನ್ಸ್ ಸಂಸ್ಥೆ ಪದಾಧಿಕಾರಿಗಳೊಂದಿಗೆ ಸೇರಿ ಗದ್ದೆಯಲ್ಲಿ ಭತ್ತದ ನಾಟಿ ಮಾಡಿ ಸಂತೋಷ ಹಂಚಿಕೊಳ್ಳುವ ಮೂಲಕ ಕೃಷಿಗೆ ಉತ್ತೇಜನ ನೀಡುತ್ತಿದ್ದೇವೆ ಎಂದರು.


ಲಯನ್ಸ್ ಸಂಸ್ಥೆ ಪದಾಧಿಕಾರಿಗಳಾದ ಪೃಥ್ವಿರಾಜ್, ಪ್ರಾಂತೀಯ ಅಧ್ಯಕ್ಷ ರಾಬಿ ಸೋಮಯ್ಯ, ಖಜಾಂಚಿ ಬೃಂದನ್ ಹಾಗೂ ಗ್ರಾಮಸ್ಥರಿದ್ದರು.