ಜಿಲ್ಲೆ

ಭತ್ತದ ಕಾಳಿನ ಹುಲ್ಲಿನ ಬಣವೆಗಳಿಗೆ ಬೆಂಕಿ

ಸುಭಾಸ ಹೆಗಡೆ ಧೂಪದಹೊಂಡ

ಮುಂಡಗೋಡ: ತಾಲೂಕಿನ ಶಿಡ್ಲಗುಂಡಿಯಲ್ಲಿ ಭತ್ತದ ಕಾಳಿನ ಹುಲ್ಲಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾದ ಘಟನೆ ಶನಿವಾರ ಜರುಗಿದೆ. ಜನ್ನು ದೊಂಡು ಜೋರೆ ಎಂಬ ರೈತನ 5 ಎಕರೆ ಜಮೀನಿನಲ್ಲಿ ಬೆಳೆದ ಭತ್ತದ ಕಾಳು ಇರುವ 2 ಬಣವೆಗಳು ಸುಟ್ಟು ಕರಕಲಾಗಿವೆ. ಬಣವೆಗಳ ಪಕ್ಕದಲ್ಲಿ ಕಸಕ್ಕೆ ಹಚ್ಚಿದ್ದ ಬೆಂಕಿಯ ಕಿಡಿಯಿಂದ ಬಣವೆಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸ್ವಪ್ನಿಲ್ ಪೆಡ್ನೇಕರ, ಬಸವರಾಜ ನಾಣಾಪುರ, ಮಂಜುನಾಥ ಪಟಗಾರ, ಚಮನಸಾಬ ನದಾಫ, ದಾದಾಪೀರ್ ಕೊರಿಗೇರಿ ಬೆಂಕಿಯನ್ನು ನಂದಿಸಿದ್ದಾರೆ.