ಹೇರೂರು ಗ್ರಾಪಂ ಹುಲ್ಲುಕೋಡುಗದ್ದೆ ಗ್ರಾಮದ ಭತ್ತದ ಗದ್ದೆ ಮಳೆಗೆ ನೆಲಕಚ್ಚಿರುವುದು. 
ಜಿಲ್ಲೆ

ಮಳೆಗೆ ಭತ್ತದ ಗದ್ದೆ ಹಾಳು

ಜಯಪುರ: ಹೇರೂರು ಗ್ರಾಪಂ ಹೇರೂರು, ಹಾಡುಗಾರು, ಕಿಬ್ಳಿ , ಹುಲ್ಲುಕೋಡುಗದ್ದೆ ಹಾಗೂ ಸೀಗೋಡು ಭಾಗಗಳಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದೆ.

ಮಳೆ ರಭಸಕ್ಕೆ ಚರಂಡಿ ನೀರು ರಸ್ತೆಗೆ ನುಗ್ಗಿ ಹಲವೆಡೆಗಳಲ್ಲಿ ರಸ್ತೆ ಹಾಳಾಗಿದ್ದರೆ, ಕೆಲವೆಡೆಗಳಲ್ಲಿ ಭತ್ತದ ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆ ನೀರು ಪಾಲಾಗಿದೆ. ಭತ್ತ ಕಾಳುಕಟ್ಟುವ ಸಮಯ ಇದಾಗಿದ್ದು ಮಳೆಯಿಂದ ಜೊಳ್ಳಾಗುವ ಸಾಧ್ಯತೆ ಇದೆ.