ಕಿನ್ನಿಗೋಳಿ: ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ ರಾಜ್ಯದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ. ಮಾತ್ರವಲ್ಲದೆ ರಾಜ್ಯದ ಏಕೈಕ ಭತ್ತದ ರೈತ ಉತ್ಪಾದಕರ ಸಂಸ್ಥೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಹೇಳಿದರು.
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಕೃಷಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಸಹಯೋಗದಲ್ಲಿ ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಭತ್ತದ ಹಡೀಲು ಭೂಮಿ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ನೂರಾರು ಎಕರೆ ಕೃಷಿ ಭೂಮಿಗಳು ಹಡೀಲು ಬಿದ್ದಿವೆ. ಸಿರಿ ಕುರಲ್ ಸಂಸ್ಥೆಯ ಕಾರ್ಯವೈಖರಿಯನ್ನು ನೋಡಿಯಾದರೂ ರೈತರು ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಭತ್ತ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಾಗಬೇಕು. ಸಿರಿಕುರಾಲ್ ಸಂಸ್ಥೆಯ ಕೆಲಸ ಪ್ರಶಂಸನೀಯವಾಗಿದ್ದು, ಇಲಾಖೆಯಿಂದ ಸಿಗುವ ಸವಲತ್ತುಗಳು ಮತ್ತು ಸಹಕಾರ ನೀಡುತ್ತೇವೆ ಎಂದರು.
ಸಂಸ್ಥೆಯ ಅಧ್ಯಕ್ಷ ಸದಾಶಿವ ಶೆಟ್ಟಿ ಮುರ, ಉಪ ಕೃಷಿ ನಿರ್ದೇಶಕರಾದ ಕುಮುದಾ, ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಇಲಾಖೆಯ ಷಣ್ಮುಖ, ಜಮೀನು ಮಾಲೀಕರಾದ ಜಯಪ್ರಕಾಶ್ ಸುವರ್ಣ, ನಿರ್ದೇಶಕರಾದ ರತ್ನಾಕರ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರವೀಣ್ ಮಾಡ, ಜೀತೇಂದ್ರ ಶೆಟ್ಟಿ, ತಾರಾನಾಥ ಶೆಟ್ಟಿ, ಜಯರಾಮ ಶೆಟ್ಟಿ, ಸುದೀಪ್ ಅಮೀನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೂಪೇಶ್, ವಿಜಯ್ ಮಾಡ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಕೆಲವು ವರ್ಷಗಳಿಂದ ಹಡೀಲು ಗದ್ದೆ ಕೃಷಿಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಎಕ್ಕಾರು ಸುತ್ತಮುತ್ತ ಹಲವಾರು ಹಡೀಲು ಕೃಷಿ ಭೂಮಿ ನಾಟಿ ಮಾಡಿದ್ದು, ಈ ಬಾರಿ 30 ಎಕರೆ ಹಡೀಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಿದ್ದೇವೆ. ಸದಾಶಿವ ಶೆಟ್ಟಿ ಮುರ, ಅಧ್ಯಕ್ಷರು, ಸಿರಿಕುರಲ್ ರೈತ ಉತ್ಪಾದಕರ ಸಂಸ್ಥೆ ಎಕ್ಕಾರುಸದಾಶಿವ ಶೆಟ್ಟಿ ಮುರ, ಅಧ್ಯಕ್ಷರು, ಸಿರಿಕುರಲ್ ರೈತ ಉತ್ಪಾದಕರ ಸಂಸ್ಥೆ ಎಕ್ಕಾರು