ಜಿಲ್ಲೆ

ಚಿಕ್ಕನಾಯಕನಹೊಸಳ್ಳಿಯಲ್ಲಿ ಭತ್ತ ಬೆಳೆಯ ಕ್ಷೇತ್ರೋತ್ಸವ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಯಲ್ಲಿ ಭತ್ತ ಬೇಸಾಯಕ್ಕಾಗಿ 30 ಸಾವಿರ ಹೆಕ್ಟೇರ್ ಪ್ರದೇಶ ಲಭ್ಯವಿದ್ದರೂ 20 ಸಾವಿರದಷ್ಟು ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಬೆಳೆಯಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ಡಿ.ಎಸ್. ಸೋಮಶೇಖರ್ ಹೇಳಿದರು. ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನಾಯಕನಹೊಸಳ್ಳಿ ಗ್ರಾಮದ ಚಿಕ್ಕಯ್ಯ ಎಂಬವರ ಭತ್ತದ ಗದ್ದೆಯಲ್ಲಿ ಬುಧವಾರ ನಡೆದ ಭತ್ತದ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದರು.

ರೈತರ ಜಮೀನು ಪಾಳು ಬಿಡಬಾರದು. ಭತ್ತ ಬೆಳೆಯ ಕೃಷಿಯಲ್ಲಿ ಜಿಲ್ಲೆಯ ರೈತರು ತೊಡಗಿಸಿಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದು ಕೊಳ್ಳಬೇಕು. ಜಿಲ್ಲೆಯ ರೈತರು ತಮ್ಮ ವಾಣಿಜ್ಯ ಬೆಳೆಗಳ ಜತೆಯಲ್ಲಿ ಭತ್ತದ ಬೆಳೆಯನ್ನು ಬೆಳೆಯಲು ಜಮೀನ್ನು ಹೊಂದಿರುತ್ತಾರೆ, ಹಾಗಾಗಿ ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಳಿಗೆ ಉಪಯೋಗಿಸುವ ಬದಲು, ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯಗಳು ಇರುವುದರಿಂದ ಭತ್ತದ ಬೇಸಾಯ ನಡೆಸಬೇಕು. ಕಾರ್ಮಿಕರ ಕೊರತೆಯನ್ನು ನೀಗಿಸಲು, ನೂತನ ಅಧುನಿಕ ಕೃಷಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕೃಷಿಗೆ ಸಂಬAಧಿಸಿದAತೆ ವಿಸ್ತಾರಣಾ ಶಿಕ್ಷಣ ಘಟಕದ ಮುಖಸ್ಧ ಡಾ. ಆರ್.ಎನ್. ಕೆಂಚರೆಡ್ಡಿ, ಡಾ. ಬಸವಲಿಂಗಯ್ಯ, ಡಾ. ದೇವರಾಜ್, ಸೇರಿದಂತೆ ಅಧಿಕಾರಿ ವರ್ಗದವರು ರೈತರಿಗೆ ಸಮಗ್ರವಾದ ಮಾಹಿತಿ ಒದಗಿಸಿದರು. ಹೆಬ್ಬಾಲೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ದೇವರಾಜ್, ಪ್ರಗತಿಪರ ಕೃಷಿಕರಾದ ಹೆಚ್.ವಿ. ಶಿವರುದ್ರಪ್ಪ, ಟಿ.ಜೆ. ಶೇಷಪ್ಪ, ಗುರುಲಿಂಗಪ್ಪ, ಟಿ.ಕೆ. ಪಾಂಡುರAಗ, ಟಿ.ಬಿ. ಜಗದೀಶ್, ಎನ್.ಎಸ್. ರಮೇಶ್, ತೊರೆನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರೂಪಾ ಮಹೇಶ್, ತೊರೆನೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ. ಕೆ. ವಸಂತ್, ರೈತ ಪ್ರಮುಖರಾದ ಚಿಕ್ಕಯ್ಯ, ಸುರೇಶ್, ಟಿ.ಪಿ. ರಮೇಶ್, ಟಿ. ಎಂ. ಚಂದ್ರು, ಚಂದ್ರಪ್ಪ, ರಾಜಶೇಖರ್ ಮತ್ತಿತರರು ಭಾಗವಹಿಸಿದ್ದರು.