ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿ ವರ್ಷದಂತೆ ಲೋಕ ಕಲ್ಯಾಣಾರ್ಥ ನಗರದ ಕಿರಣ ಗೆಳೆಯರ ಬಳಗದ ವತಿಯಿಂದ ಆ. 25ರಂದು ಸಂಜೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸದಸ್ಯ ಕಿರಣ ಹಾವಣಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂದು ಸಂಜೆ 6.30ಕ್ಕೆ ಧಾರವಾಡ ಎನ್ಟಿಟಿಎಫ್ ಬಳಿಯ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗುವುದು. ಪಾದಯಾತ್ರೆ ತೆರಳುವ ಮಾರ್ಗಮಧ್ಯದಲ್ಲಿನ ದೇವಸ್ಥಾನ, ದರ್ಗಾ, ಚರ್ಚ್ಗಳಿಗೆ ತೆರಳಿ ಪೂಜೆ ಸಲ್ಲಿಸಲಾಗುವುದು. ಮಧ್ಯರಾತ್ರಿ ಸಿದ್ದಾರೂಢ ಮಠ ತಲುಪಲಾಗುವುದು. ಪಾದಯಾತ್ರೆಯಲ್ಲಿ ಭಾಗವಹಿಸುವ ಪುರುಷರು ಹಾಗೂ ಮಹಿಳೆಯರು ಕಡ್ಡಾಯವಾಗಿ ಭಾರತೀಯ ಸಂಸ್ಕೃತಿಯ ಉಡುಪುಗಳನ್ನು(ಬಿಳಿ ಟಿ ಶರ್ಟ್, ಪ್ಯಾಂಟ್, ಟೋಪಿ) ಪಾಲನೆ ಮಾಡಬೇಕು.
ಈ ಬಾರಿ 100ಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಬಳಗದ ಸದಸ್ಯರು ತಮ್ಮ ತಮ್ಮ ಉದ್ಯೋಗಗಳ ಜತೆಗೆ ಸಾಮಾಜಿಕ ಕಾರ್ಯ, ಸಮಾಜದ ಏಳಿಗೆಗಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತ ಪ್ರತಿವರ್ಷ ಶ್ರಾವಣದ ಕೊನೆ ಸೋಮವಾರ ಲೋಕ ಕಲ್ಯಾಣಾರ್ಥ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.