ಜಿಲ್ಲೆ

ಜು.೩೦ ರಂದು ಅರೆಭಾಷೆ ಪದಕೋಶ ಬಿಡುಗಡೆ

reportermys

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತರಲಾದ ಅರೆಭಾಷೆ ಪದಕೋಶ ಬಿಡುಗಡೆ ಕಾರ್ಯಕ್ರಮ ಜು೩೦ರಂದು ನಗರದ ಕೊಡಗು ಗೌಡ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದರು.


ಅಂದು ಬೆಳಿಗ್ಗೆ ೧೧.೧೫ ಗಂಟೆಗೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆರವರ ಸಭಾಧ್ಯಕ್ಷತೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅರೆಭಾಷೆ ಪದಕೋಶವನ್ನು ವಿರಾಜಪೇಟೆ ಶಾಸಕ ಕೊಂಬಾರನ ಜಿ.ಬೋಪಯ್ಯರವರು ಬಿಡುಗಡೆಗೊಳಿಸಲಿದ್ದಾರೆ. ಪದಕೋಶದ ಬಗ್ಗೆ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಲಿದ್ದಾರೆ. ಪ್ರಮುಖರಾದ ಅತಿಥಿಗಳಾಗಿ ಸೂರ್ತಲೆ ಸೋಮಣ್ಣ, ಪೇರಿಯನ ಜಯಾನಂದ, ಹೊಸೂರು ರಮೇಶ್ ಜೋಯಪ್ಪ, ರಾಜೇಶ್ ತೇನನ, ಕುಂಜಿಲನ ಮುತ್ತಮ್ಮ ಇವರು ಉಪಸ್ಥಿತರಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ ಉಪಸ್ಥಿತರಿದ್ದರು.