ಜಿಲ್ಲೆ

ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

Mysuru - Desk - Yashavanth Kumar N

ಮದ್ದೂರು: ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ನಡೆಯುತ್ತಿರುವ ಪಿ.ಆರ್.ಒ ಮತ್ತು ಎ.ಪಿ.ಆರ್‌ಒ ತರಬೇತಿ ಕೇಂದ್ರಗಳಿಗೆ ಭಾನುವಾರ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ನೀಡಿ ಪರಿಶೀಲಿಸಿದರು.

ಚುನಾವಣೆಯನ್ನು ಕ್ರಮಬದ್ಧವಾಗಿ ನಡೆಸುವಲ್ಲಿ ಪಿ.ಆರ್.ಒ ಹಾಗೂ ಎ.ಪಿ.ಆರ್.ಒ.ಗಳ ಕೆಲಸ ಮಹತ್ವದಾಗಿರುತ್ತದೆ. ತರಬೇತಿಯಲ್ಲಿ ಯಾವುದೇ ಸಂಶಯ ಅಥವಾ ಗೊಂದಲಗಳಿದ್ದಲ್ಲಿ ಮಾಸ್ಟರ್ ಟ್ರೈನರ್‌ಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪಿ.ಆರ್.ಒ ಹಾಗೂ ಎ.ಪಿ.ಆರ್.ಒ.ಗಳ ಮಾಹಿತಿಗಾಗಿ ರೂಪಿಸಿರುವ ಹ್ಯಾಂಡ್‌ಬುಕ್ ಪಡೆದುಕೊಂಡು ಎರಡು ಅಥವಾ ಮೂರು ಬಾರಿ ಓದಿಕೊಳ್ಳಬೇಕು. ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಿ ಎಂದರು.

ಇದೇ ಸಂದರ್ಭದಲ್ಲಿ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಹಾಯಕ ಚುನಾವಣಾಧಿಕಾರಿ ಲೋಕನಾಥ್, ತಹಸೀಲ್ದಾರ್ ಸೋಮಶೇಖರ್, ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ ಇತರರು ಇದ್ದರು.