ಸಿಂಧನೂರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಎಸ್. ಶರಣೇಗೌಡ, ಬೀರಪ್ಪ ಶಂಭೋಜಿ, ನಾಗೋಜಿ ಮರಾಠ, ರಂಗನಗೌಡ ಗೋರೆಬಾಳ, ಶಾಮೀದ್ ಸಾಬ್ ಇದ್ದರು. 
ಜಿಲ್ಲೆ

ಸ್ಕೌಟ್ಸ್, ಗೈಡ್ಸ್ ಘಟಕಗಳು ರಚನೆಯಾಗಲಿ

ಸಿಂಧನೂರು: ಶಾಲಾ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಮೌಲ್ಯಗಳನ್ನು ತುಂಬಲು ಶಿಕ್ಷಕರು ಶ್ರಮಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.

ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬಿ

ನಗರದ ಪ್ರವಾಸ ಮಂದಿರದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದರು. ಈಗಾಗಲೇ ರಾಜ್ಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ದಿಂದ ಅತ್ಯುತ್ತಮ ಕೆಲಸಗಳು ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ. ಪ್ರತಿ ಶಾಲೆ, ಕಾಲೇಜು ಹಂತದಲ್ಲಿ ಸ್ಕೌಟ್ಸ್, ಗೈಡ್ಸ್ ಘಟಕಗಳು ರಚನೆಯಾಗಬೇಕು ಎಂದರು.

ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್, ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಸ್.ಶರಣೇಗೌಡ, ಕಾರ್ಯದರ್ಶಿ ಬೀರಪ್ಪ ಶಂಭೋಜಿ, ಸಹಾಯಕ ಜಿಲ್ಲಾ ಆಯುಕ್ತ ರಾಮದಾಸ್ ನಾಯಕ, ಸ್ಕೌಟ್ಸ್ ಮಾಸ್ಟರ್ ಬಸವರಾಜ್ ಎಚ್., ಪ್ರಮುಖರಾದ ಶ್ರೀಧರಗೌಡ ಪಾಟೀಲ್, ನಾಗೋಜಿ ಮರಾಠ, ರಂಗನಗೌಡ ಗೋರೆಬಾಳ, ಶಾಮೀದ್ ಸಾಬ್ ಇದ್ದರು.