ಜಿಲ್ಲೆ

ಪಿ.ಬಿ. ಶ್ರೀನಿವಾಸ್ ನೆನಪಿನೋತ್ಸವ

ಅವಿನಾಶ್ ಜೈನಹಳ್ಳಿ

ಮೈಸೂರು: ಎಸ್.ಎಂ.ಮ್ಯೂಸಿಕ್ ನಿಂದ ನಾದಬ್ರಹ್ಮ ಸಭಾಂಗಣದಲ್ಲಿ ಏ.21ರಂದು ಸಂಜೆ 5ಕ್ಕೆ ಗಾಯಕ ಪಿ.ಬಿ.ಶ್ರೀನಿವಾಸ್ ನೆನಪಿನೋತ್ಸವ ಆಯೋಜಿಸಲಾಗಿದೆ ಎಂದು ಸಂಗೀತ ಕಲಾವಿದ ಗಾಡ್ವಿನ್‌ಪಾಲ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾಯಕ ಎಸ್.ಎಚ್.ಶಾಂತಕುಮಾರ್ ಮತ್ತು ತಂಡದ 15 ಗಾಯಕರು ಪಿ.ಬಿ.ಶ್ರೀನಿವಾಸ್ ಗಾಯನದ ಹಾಡುಗಳನ್ನು ಪ್ರಸ್ತುತಪಡಿಸುವರು. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.