ರೈತ ಕಲ್ಯಾಣಿ ಜಮಾದಾರ ಎಂಬುವರು ಬೊರ್‌ವೆಲ್‌ದೊಳಗೆ ರಿಂಗ್‌ಹಾಕಿ ಹಗ್ಗ ಬಿಟ್ಟುಬಾಲಕನ ಎರಡು ರಟ್ಟೆಗಳಿಗೆ ಕಟ್ಟು ಬೀಳುವಂತೆ ಮಾಡಿ ಹಗ್ಗದ ಮೂಲಕ ಮೇಳೆದು ತಂದಿದ್ದರು
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಆಳಂದ ತಾಲೂಕಿನ ಭೂಸನೂರ ಗ್ರಾಮದ ಹೊರ ವಲಯದ ತೋಟದಲ್ಲಿ ಕೊಳವೆ ಬಾವಿಯಲ್ಲಿ ನವ್ಬೆಂಬರ್ ೨೦೦೭ರಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ಐದು ವರ್ಷದ ಬಾಲಕ ನವನಾಥನ್ನು ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಜೀವಂತವಾಗಿ ಹೊರ ತೆಗೆಯಲಾಯಿತು.
ದೇವಂತಗಿ ಗ್ರಾಮದ ನವನಾಥ ಕಾಂಬಳೆ ಎಂಬಾತ ೨೦೦೭ ರಲ್ಲಿ ಬೋರ್‌ವೆಲïದಲ್ಲಿ ಬಿದ್ದಿದ್ದ. ಜಿ¯್ಲÁಡಳಿತ ವಹಿಸಿದ್ದ ಕಾಳಜಿಯಿಂದ ೧೩ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆತನನ್ನು ರP್ಷÀಣೆ ಮಾಡಲಾಗಿತ್ತು. ದೇವಂತಗಿ ಗ್ರಾಂದ ಕಾಶಿನಾಥ ಕಾಂಬಳೆ ಮತ್ತು ಅವರ ಪತ್ನಿ ಭೂಸನೂರ-ಭಟ್ಟರಕಿ ಸೀಮಾಂತರದಲ್ಲಿರುವ ತೋಟದಲ್ಲಿ ಕೆಲಸ ಮಾಡಲು ಹೋಗಿದ್ದರು. ಆಗ ಜತೆಗೆ ಬಾಲಕ ನವನಾಥನನ್ನು ಕರೆದುಕೊಂಡು ಹೋಗಿದ್ದರು.
ಬಾಲಕ ಆಟವಾಡುವ ವೇಳೆಯಲ್ಲಿ ತೆರೆದಿದ್ದ ಬೊರ್‌ವೆಲ್‌ದೊಳಗೆ ಬಿದ್ದಿದ್ದ. ಆಗ ಜಿಲ್ಲಾಡಳಿತ ಕಾರ್ಯಾಚರಣೆ ಶುರುವಿಟ್ಟಿತ್ತು. ಆದರೆ, ಸುತ್ತಲು ಮಣ್ಣು ಅಗೆಯುವಾಗ ಬೋರ್‌ವೆಲ್‌ದೊಳಗೆ ಮಣ್ಣು ಬಿಳಲು ಶುರುವಾಯಿತು. ಆಗ ಬಾಲಕನ ಪ್ರಾಣಕ್ಕೆ ಅಪಾಯವಾಗಬಹುದು ಎಂದುಕೊAಡು ಭೂಸನೂರ ಗ್ರಾಮದ ರೈತ ಕಲ್ಯಾಣಿ ಜಮಾದಾರ ಎಂಬುವರು ತಮ್ಮ ಚಾಣಾಕ್ಷಣತೆಯ ಮೂಲಕ ಬೊರ್‌ವೆಲ್‌ದೊಳಗೆ ರಿಂಗ್‌ಹಾಕಿದ ಹಗ್ಗ ಬಿಟ್ಟು ಅದನ್ನು ಬಾಲಕನ ಎರಡು ರಟ್ಟೆಗಳಿಗೆ ಕಟ್ಟು ಬೀಳುವಂತೆ ಮಾಡಿ ಹಗ್ಗದ ಮೂಲಕ ಮೇಳೆದು ತಂದಿದ್ದರು.
ಕಲ್ಯಾಣಿ ಅವರು ಮಾಡಿದ ಕಾರ್ಯವನ್ನು ಮೆಚ್ಚಿ ಜಿಲ್ಲಾಡಳಿತ ಅವರಿಗೆ ೫೦ ಸಾ.ರೂ. ಬಹುಮಾನ ನೀಡಿತ್ತು. ಆದರೆ, ಕಲ್ಯಾಣಿ ಅವರು ಅದನ್ನು ಬಾಲಕನ ಊರಿಗೆ ಹೋಗಿ ಆತನ ಕುಟುಂಬದವರಿಗೆ ನೀಡಿ ಮಾನವೀಯತೆ ಮರೆದಿದ್ದರು. ಕಾರ್ಯಾಚರಣೆಯ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಿತ್ತು. ಅಲ್ಲದೆ ಮರುಜೀವ ಪಡೆದುಕೊಂಡಿದಿದ್ದ ನವನಾಥ ಕುಟುಂಬಕ್ಕೆ ೧ ಲಕ್ಷ ರೂ. ಸಹ ನೀಡಲಾಯಿತು ಎಂದು ಕಾರ್ಯಾಚರಣೆ ನಡೆಸಿದ ಕಲ್ಯಾಣಿ ನೆನಪು ಮೆಲಕು ಹಾಕಿದರು.
ಬದುಕುಳಿದ ನಂತರ ಪೋಷಕರೊಂದಿಗೆ ಸ್ವಂತ ಊರಲ್ಲಿದ್ದ. ಶಾಲೆಯನ್ನು ಕಲಿತ. ಈಗ ನವನಾಥನಿಗೆ ೨೩ ವರ್ಷದ ಯುವಕ. ಕೋವಿಡ್ ಕಾಲದಲ್ಲಿ ಆತನ ತಂದೆ ಕಾಶೀನಾಥ ಕಾಂಬಳೆ ತೀರಿಕೊಂಡರು. ಮೊದಲೇ ಕಿತ್ತು ತಿನ್ನುವ ಬಡತನ ಹೊಟ್ಟೆಪಾಡಿಗಾಗಿ ತಾಯಿ ಸುಗಲಾಬಾಯಿ ಈಗ ಮಗ ನವನಾಥನೊಂದಿಗೆ ಹುಬ್ಬಳ್ಳಿಯ ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ದಸರಾ ವೇಳೆಯಲ್ಲಿ ಹುಬ್ಬಳ್ಳಿಗೆ ಹೋಗಿದ್ದಾರೆ. ಮುಂಗಾರು ಶುರುವಾದ ಬಳಿಕ ಮರಳಿ ಗ್ರಾಮಕ್ಕೆ ಬರುತ್ತಾರೆ ಎಂದು ಸಂಬAಧಿಕರು ಹೇಳಿದರು.