ಸಿಂಧನೂರಿನಲ್ಲಿ ಕೋವಿಡ್ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆಗೆ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿಸೋಮವಾರ ಚಾಲನೆ ನೀಡಿದರು.  
ಜಿಲ್ಲೆ

ಅಗತ್ಯ ಆಕ್ಸಿಜನ್, ಔಷಧ ಪೂರೈಕೆ ಮಾಡಲು ಒತ್ತಾಯಿಸಿದ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ

ಸಿಂಧನೂರು: ಕರೊನಾ ಸೋಂಕಿತರಿಗೆ ಸಮಪರ್ಕ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗೆ ಅಗತ್ಯ ಆಕ್ಸಿಜನ್, ಔಷಧ ಪೂರೈಕೆ ಮಾಡುವಂತೆ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ ಒತ್ತಾಯಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನಿಂದ ಸೋಮವಾರ ಕೋವಿಡ್ ರೋಗಿಗಳಿಗೆ ನಿತ್ಯ ಹಾಲು, ಹಣ್ಣು, ಬ್ರೆಡ್ ಮತ್ತು ಮೊಟ್ಟೆ ಇತರ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕು ಆಸ್ಪತ್ರೆಗೆ ಶೀಘ್ರವೇ ಎಲ್ಲಾ ಸೌಲಭ್ಯ ಒದಗಿಸಬೇಕು ಎಂದರು. ನಗರಸಭೆ ಸದಸ್ಯರಾದ ಆಲಂಬಾಷಾ, ತಿಮ್ಮಯ್ಯ ಭಂಗಿ, ಸುರೇಶ ಶೇಠ್, ಆರ್.ಸಿ.ಪಾಟೀಲ್, ಮಹ್ಮದ್ ಇಕ್ಬಾಲ್, ರಾಜಶೇಖರಗೌಡ, ಸಿದ್ದಲಿಂಗ, ಖಾಸಿಂ ದಢೇಸುಗೂರು, ಹುಸೇನ ಇತರರು ಇದ್ದರು.