ಹೆಬ್ರಿ: ಲಯನ್ಸ್ ಜಿಲ್ಲೆ 317ಸಿ ಹಾಗೂ ಲಯನ್ಸ್ ಜಿಲ್ಲೆ 317ಇಯ ಕ್ಲಬ್‌ಗಳಾದ ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಹಾಗೂ ಲಯನ್ಸ್ ಕ್ಲಬ್ ಪ್ರೇರಣಾ ಬೆಂಗಳೂರು ಪ್ರಾಯೋಜಕತ್ವದಲ್ಲಿ ಟ್ವಿನ್ನಿಂಗ್ ಪ್ರೋಗ್ರಾಮ್ ಇತ್ತೀಚೆಗೆ ಹೆಬ್ರಿ ಶ್ರೀ ರಾಘವೇಂದ್ರ ಆಸ್ಪತ್ರೆಯಲ್ಲಿ ಜರುಗಿತು.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸದಸ್ಯೆ ಡಾ.ಭಾರ್ಗವಿ ಆರ್.ಐತಾಳ್, ಡಾ.ರಾಮಚಂದ್ರ ಐತಾಳ್ ನೇತೃತ್ವದಲ್ಲಿ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಮೂಲಕ ಸಮಾಜಸೇವಾ ಕಾರ್ಯ ನಡೆಸಿ, ಹೆಬ್ರಿ ಲಯನ್ಸ್ ಕ್ಲಬ್‌ಗೆ ನೀಡಿದ ಸೇವೆ ಗುರುತಿಸಿ ಟ್ರಸ್ಟ್‌ಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಹಸ್ತಾಂತರಿಸಲಾಯಿತು.
ಲಯನ್ಸ್ ಜಿಲ್ಲೆ 317ಇಯ ಪ್ರೇರಣಾ ಲಯನ್ಸ್ ಕ್ಲಬ್ ಬೆಂಗಳೂರು ಅಧ್ಯಕ್ಷ ಗಿಳಿಯಾರು ಕೃಷ್ಣ ಹೇರಳೆ, ಕಾರ್ಯದರ್ಶಿ ಲಕ್ಷ್ಮೀ ಕೆ.ಹೇರಳೆ, ಲಯನ್ಸ್ ಜಿಲ್ಲೆ 317ಸಿ ಅಧ್ಯಕ್ಷ ನಾಗೇಶ್ ನಾಯಕ್ ಸೀತಾನದಿ, ಪ್ರಾಂತ್ಯಾಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ, ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ರಾಮಚಂದ್ರ ಐತಾಳ್, ನಿರ್ದೇಶಕಿ ಡಾ.ಭಾರ್ಗವಿ ಆರ್.ಐತಾಳ್, ಡಾ.ಕಾರ್ತಿಕ್ ಐತಾಳ್ ಉಪಸ್ಥಿತರಿದ್ದರು.