ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗುಡ್ಡದ ಬಳಿಯ ಶ್ರೀ ದತ್ತಾತ್ರೇಯ ವಿದ್ಯಾವರ್ಧಕ ಸಂದ ಆಕ್ಸರ್ಡ್ ಪಾಟೀಲ್ಸ್ ಸಮೂಹ ಶಿಣ ಸಂಸ್ಥೆಯಲ್ಲಿ ೆ.9ರಂದು ಬೆಳಗ್ಗೆ 11.30 ಗಂಟೆಗೆ ಆಕ್ಸರ್ಡ್ ಪಾಟೀಲ್ಸ್ ಜ್ಯೂನಿಯರ್ ಜೀನಿಯಸ್ ಆವಾರ್ಡ್&2025 ಸ್ಕಾಲರ್ಶಿಪ್ ಸ್ಪರ್ಧಾ ಪರೀೆ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಅಧ್ಯ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮಿತ್ಗೌಡ ಪಾಟೀಲ ತಿಳಿಸಿದ್ದಾರೆ.
ಬುಧವಾರ ವಿಜಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಮ್ಮ ಸಂಸ್ಥೆಯಡಿ ನಾಗರಬೆಟ್ಟದಲ್ಲಿ ನಡೆಯುತ್ತಿರುವ ಆಕ್ಸರ್ಡ್ ಪಾಟೀಲ್ಸ್ ಕನ್ನಡ ಮತ್ತು ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಪ್ರಸಕ್ತ ವರ್ಷ 5 ಮತ್ತು 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಿದ್ದು, ಸಿಬಿಎಸ್ಇ, ಐಸಿಎಸ್ಇ, ರಾಜ್ಯ ಪಠ್ಯಕ್ರಮದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿರುವವರು ಪಾಲ್ಗೊಳ್ಳಬಹುದಾಗಿದೆ.
ಮೊದಲ 5 ರ್ಯಾಂಕ್ ಪಡೆದು ಟಾಪರ್ ಆಗುವವರಿಗೆ 90 ಸಾವಿರ ರೂ., 6&10 ರ್ಯಾಂಕ್ ಪಡೆಯುವ ವಿನ್ನರ್ಗಳಿಗೆ 60 ಸಾವಿರ ರೂ. ಮೌಲ್ಯದ ಸ್ಕಾಲರ್ಶಿಪ್ ಯೋಜನೆ ಲಭ್ಯವಾಗಲಿದೆ.
ಸ್ಕಾಲರ್ಶಿಪ್ಗೆ ಆಯ್ಕೆಗೊಂಡಲ್ಲಿ 5ನೇ ತರಗತಿಯವರಿಗೆ 6 ಮತ್ತು 7ನೇ ತರಗತಿವರೆಗೆ 2 ವರ್ಷದ, 7ನೇ ತರಗತಿಯವರಿಗೆ 8, 9 ಮತ್ತು 10ನೇ ತರಗತಿವರೆಗೆ 3 ವರ್ಷದ ಸಂಪೂರ್ಣ ಉಚಿತ ಶಿಣ ಸೌಲಭ್ಯ ಒದಗಿಸಿಕೊಡಲಾಗುತ್ತದೆ. ಪರೀೆಯು ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಗ್ರಾಮರ್ ವಿಷಯಗಳನ್ನೊಳಗೊಂಡ 60 ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳಿದ್ದು ಉತ್ತರಿಸಲು ಒಂದು ಗಂಟೆ ಕಾಲಾವಕಾಶವಿದೆ.
ಪರೀಾರ್ಥಿಗಳು ತಮ್ಮ ಆಧಾರ ಕಾರ್ಡ್, ಶಾಲೆಯ ಐಡಿ ಕಾರ್ಡ್ ಕಡ್ಡಾಯವಾಗಿ ತರಬೇಕು. ಹೆಸರು ನೋಂದಾಯಿಸಲು ವಿದ್ಯಾರ್ಥಿಯ ಹೆಸರು, ವರ್ಗ, ಶಾಲೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮಾದರಿಯಲ್ಲಿ ಸಂದೇಶ ಟೈಪ್ ಮಾಡಿ ಮೊ: 7483930372ಗೆ ಎಸ್ಎಂಎಸ್ ಅಥವಾ ವಾಟ್ಸ್ಆಪ್ ಸಂದೇಶ ಕಳಿಸಬೇಕು. ಪರೀೆ ದಿನದಂದೂ ಹೆಸರು ನೋಂದಾಯಿಸಬಹುದು. ಮಾಹಿತಿಗೆ ಮೊ: 8971769144 (ಅಧ್ಯರು) ಅಥವಾ ಮೊ: 8970507159, 7996679906 ಸಂಖ್ಯೆ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
ಪ್ರತಿ ವರ್ಷ ಸಂಸ್ಥೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2 ಕೋಟಿ ರೂಗಳನ್ನು ಮೀಸಲಿಟ್ಟು ವಿವಿಧ ಹಂತಗಳ ಸ್ಕಾಲರ್ಶಿಪ್ ಕೊಡುವ ಸಂಪೂರ್ಣ ಉಚಿತ ಶಿಣ ಯೋಜನೆ ಜಾರಿಯಲ್ಲಿದೆ. ಈಗಾಗಲೇ ಎಸ್ಎಸ್ಎಲ್ಸಿ ಓದುತ್ತಿರುವವರಿಗೆ ಒಂದು ಹಂತದ ಪರೀೆ ಮುಗಿದಿದ್ದು ಇನ್ನೊಂದು ಹಂತದ ಪರೀೆ ನಡೆಸಿ ಪಿಯು ವಿಜ್ಞಾನ ಉಚಿತ ಶಿಣ ಯೋಜನೆಗೆ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. > ಅಮಿತ್ಗೌಡ ಪಾಟೀಲ, ಆಡಳಿತಾಧಿಕಾರಿ, ಆಕ್ಸರ್ಡ್ ಪಾಟೀಲ್ಸ್ ಸಮೂಹ ಶಿಣ ಸಂಸ್ಥೆ, ನಾಗರಬೆಟ್ಟ.