ವಿಜಯಪುರ: ತೆರಬಂಡಿ ಓಟ ಸ್ಪರ್ಧೆ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದ ಎತ್ತು ಇದೀಗ ಬರೊಬ್ಬರಿ 18 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ವಿಜಯಪುರಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬುವರಿಗೆ ಸೇರಿದ ಎತ್ತು ಇದಾಗಿದೆ. ಮಾಲೀಕ ರಾಮನಗೌಡ ಪಾಟೀಲ್ ಎತ್ತಿಗೆ ಹಿಂದೂಸ್ಥಾನ ಹೆಚ್ಪಿ ಎಂದು ನಾಮಕರಣ ಮಾಡಿದ್ದಾರೆ. ಐದುವರೆ ಅಡಿ ಎತ್ತರವಿರುವ ಎತ್ತಿಗೆ ಮಾಲೀಕ ನಿತ್ಯ ಪೌಷ್ಟಿಕಾಂಶ ಆಹಾರ ನೀಡುತ್ತಿದ್ದನು. ಹಾಲು, ಮೊಟ್ಟೆ ದವಸ ಧಾನ್ಯ ಆಹಾರವಾಗಿ ನೀಡುತ್ತಿದ್ದನು.
ತೆರಬಂಡಿ ಎಳೆಯುವುದರಲ್ಲಿ ನಿಸ್ಸೀಮ. ಉತ್ತರ ಕರ್ನಾಟಕ ಭಾಗದ ಯಾವುದೇ ಜಿಲ್ಲೆಯಲ್ಲಿ ತೆರಬಂಡಿ ಸ್ಪರ್ಧೆ ನಡೆದರೂ, ಈ ಎತ್ತು ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿತ್ತು. ಎತ್ತು ಇಲ್ಲಿಯವರೆಗೆ 15 ಲಕ್ಷ ರೂ. ಹಣ, 40 ಗ್ರಾಂ ಚಿನ್ನ, ಎರಡು ಬೆಳ್ಳಿ ಗದೆ, 4 ಬೈಕ್ ಗೆದ್ದಿದೆ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ರೈತ ಸದಾಶಿವ ಡಾಂಗೆ, 18 ಲಕ್ಷದ 1 ಸಾವಿರ ಸ್ಥಳದಲ್ಲೇ ಎಣಿಸಿ ರಾಮನಗೌಡ ಪಾಟೀಲ್ ಅವರ ಕೈಗೆ ನೀಡಿದ್ದಾರೆ. ರಾಮನಗೌಡ ಪಾಟೀಲ್ ವಿಧಿ ಇಲ್ಲದೆ ಎತ್ತನ್ನು ಮಾರಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಕಾರ ಹುಣ್ಣಿಮೆ ಸಮಯದಲ್ಲಿ ಎತ್ತುಗಳ ಓಟ ಸ್ಪರ್ಧೆ ನಡೆಯುತ್ತದೆ. ಮತ್ತು ಬೇಸಿಗೆ ಕಾಲದಲ್ಲೂ ಎತ್ತುಗಳ ಓಟ ಸ್ಪರ್ಧೆ ಆಯೋಜಿಸಲಾಗಿರುತ್ತದೆ. ತೆರಬಂಡಿ ಓಟ ಸ್ಪರ್ಧೆ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದ ಎತ್ತು ಇದೀಗ ಬರೊಬ್ಬರಿ ಎತ್ತು (Ox) 18 ಲಕ್ಷಕ್ಕೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.