ಜಿಲ್ಲೆ

ಎತ್ತು, ಭೂಮಿ ರೈತರ ಜೀವನಾಡಿ

ಪ್ರಶಾಂತ ಹೂಗಾರ

ಐನಾಪುರ: ಭೂಮಿ ಹಾಗೂ ಎತ್ತುಗಳು ರೈತರ ಜೀವನಾಡಿಯಿದ್ದಂತೆ. ಇವುಗಳನ್ನು ಸ್ವಚ್ಛ ಮನಸ್ಸಿನಿಂದ ಪೂಜಿಸುವವರ ಬಾಳು ಬಂಗಾರವಾಗುತ್ತದೆ ಎಂದು ಶಿರಗುಪ್ಪಿ ಶುಗರ್ಸ್‌ ಅಧ್ಯಕ್ಷ ಕಲ್ಲಪ್ಪಣ್ಣ ಮಗೆನ್ನವರ ಹೇಳಿದರು.

ಇಲ್ಲಿನ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಜೋಡೆತ್ತಿನ ಶರ್ಯತ್ತು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ದನಗಳ ಜಾತ್ರೆಗೆ ಐನಾಪುರ ಪ್ರಸಿದ್ಧವಾಗಿದೆ. ಜಾತ್ರೆ ನಿಮಿತ್ತ ಹಮ್ಮಿಕೊಂಡಿರುವ ವಿವಿಧ ಸ್ವರ್ಧೆ ಹಾಗೂ ಕೃಷಿ ಮೇಳ ಸಾವಿರಾರೂ ಜನರಿಗೆೆ ಅನುಕೂಲವಾಗಿದೆ. ರೈತರ ಸಹಕಾರದಿಂದ ಬೃಹತ್ ಕೃಷಿ ಪ್ರದರ್ಶನ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಜೋಡೆತ್ತಿನ ಶರ್ಯತ್ತಿನಲ್ಲಿ ಅಲಕನೂರಿನ ಶಂಕರ ಪೂಜಾರಿ ಪ್ರಥಮ, ವಿಜಯಪುರದ ಹನುಮಂತ ಅತಾಲಟ್ಟಿ ದ್ವಿತೀಯ, ಭಿರಡಿ ಗ್ರಾಮದ ರಮೇಶ ನಡೋಣಿ ತೃತೀಯ, ಬಬಲೇಶ್ವರದ ಕುಮಟೆ ಚತುರ್ಥ ಸ್ಥಾನ ಪಡೆದುಕೊಂಡರು.

ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ, ಅರುಣ ಗಾಣಿಗೇರ, ಸುರೇಶ ಅಡಿಶೇರಿ, ಈರಣ್ಣ ಬಾಗಾದಿ, ಸುಭಾಷ ಜೋಶಿ, ಹರ್ಷವರ್ಧನ ಪಾಟೀಲ, ಸುನೀಲ ಪಾಟೀಲ, ಪಾಯಪ್ಪ ಕುಡವಕ್ಕಲಗಿ, ರಾಹುಲ್ ಬಣಜವಾಡ, ಅಪ್ಪಾಸಾಹೇಬ ಲಿಂಬಿಕಾಯಿ, ಅಮಗೊಂಡ ಒಡೆಯರ, ಶಾಂತಿನಾಥ ಉಗಾರೆ ಇತರರು ಇದ್ದರು.