ಹೂವಿನಹಡಗಲಿ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಸುರಿದ ಮಳೆಗೆ 3 ಮನೆಗಳಿಗೆ ಹಾನಿಯಾಗಿದ್ದು, ಸಿಡಿಲು ಬಡಿದು ಎತ್ತು ಸತ್ತಿದೆ. ಸಮೀಪದ ಮುಸುಕಿನಕಲ್ಲಹಳ್ಳಿ ಗ್ರಾಮದಲ್ಲಿ ಉಚ್ಚೆಂಗೆಮ್ಮ ಅವರ ಎತ್ತು ಸಿಡಿಲು ಬಡಿದು ಸತ್ತಿದೆ. ಕಾಗನೂರು, ಹಿರೇಕೊಳಚಿ, ಬಿತ್ಯಾನ ತಾಂಡಗಳಲ್ಲಿ ತಲಾ 3 ಮನೆಗಳು ಕುಸಿದು ಬಿದ್ದಿವೆ. ರಸ್ತೆಯ ಗುಂಡಿಗಳಲ್ಲಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು. ತಾಲೂಕಿನಾದ್ಯಂತ 28.2 ಮಿಮೀ ಮಳೆ ಸುರಿದಿದೆ.