ಗೂಬೆ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವುದು. ಎಸ್‌ಐ ರೋಹಿಣಿ ಪಾಟೀಲ, ಸಿಬ್ಬಂದಿ ಎಎಸ್.ಆರ್.ಅರಿಬೆಂಚಿ, ಕೆ.ಡಿ.ಹಿರೇಮಠ, ಬಿ.ಬಿ.ಇಂಗಳಗಿ ಇದ್ದಾರೆ. 
ಜಿಲ್ಲೆ

ಗೂಬೆ ಸಾಗಿಸುತ್ತಿದ್ದ ಇಬ್ಬರ ಬಂಧನ

ಸದಲಗಾ: ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದ ಬಳಿ ಗುರುವಾರ ಗೂಬೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬಿಳ್ಳೂರಿನ ಜ್ಞಾನೇಶ್ವರ ಜಾವೇರ(39), ಭೈರವನಾಥ ಮಜಲದಾರ(23) ಬಂಧಿತರು. ಅರಣ್ಯ ಪ್ರದೇಶದಿಂದ ಗೂಬೆ ಹಿಡಿದು ತಂದಿದ್ದರು. ಪಿಎಸ್‌ಐ ರೋಹಿಣಿ ಪಾಟೀಲ, ಸಿಬ್ಬಂದಿ ಎಎಸ್.ಆರ್.ಅರಿಬೆಂಚಿ, ಕೆ.ಡಿ.ಹಿರೇಮಠ, ಬಿ.ಬಿ.ಇಂಗಳಗಿ ಕಾರ್ಯಾಚರಣೆ ನಡೆಸಿದ್ದರು.