ಜಿಲ್ಲೆ

ಧರಣಿ ಹಿಂಪಡೆದ ಗುತ್ತಿಗೆ ಪೌರ ಕಾರ್ವಿುಕರು

Dharwada - Santosh Vaidya

ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹವನ್ನು ಹು-ಧಾ ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ವಿುಕರು ಮಂಗಳವಾರ ಹಿಂಪಡೆದಿದ್ದಾರೆ.

ಧರಣಿ ನಿರತರನ್ನು ಭೇಟಿ ಮಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ವಿುಕರ ನೇರವೇತನ ಪಾವತಿ ವಿಷಯದ ಬಗ್ಗೆ ಠರಾವು ಪಾಸ್ ಮಾಡಲಾಗುವುದು. ನೇರವೇತನ ಪಾವತಿಗೆ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಅನುಮೋದನೆ ಅವಶ್ಯವಿದ್ದಲ್ಲಿ ಮುಂಬರುವ ಅಧಿವೇಶನದಲ್ಲಿ ರ್ಚಚಿಸಲಾಗುವುದು. ಸರ್ಕಾರದ ಹಂತದಲ್ಲಿ ಪೌರಕಾರ್ವಿುಕರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಸದನದಲ್ಲಿ ಹೋರಾಟವನ್ನು ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಸದಸ್ಯರಾದ ವೀರಣ್ಣ ಸವಡಿ, ಶಿವು ಹಿರೇಮಠ, ಸಂತೋಷ ಚವ್ಹಾಣ, ಬೀರಪ್ಪ ಖಂಡೇಕಾರ, ರಾಧಾಬಾಯಿ ಸಪಾರೆ, ಇತರರು ಇದ್ದರು.

ಶಾಸಕರ ಭರವಸೆಯ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ಧಾರವಾಡ ಜಿಲ್ಲಾ ಎಸ್​ಸಿ ಎಸ್​ಟಿ ಪೌರ ಕಾರ್ವಿುಕರ ಹಾಗೂ ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ತಿಳಿಸಿದ್ದಾರೆ.

ಗಂಗಮ್ಮ ಸಿದ್ರಾಮಪುರ, ರಮೇಶ ರಾಮಯ್ಯನವರ, ಬಸಪ್ಪ ಮಾದರ, ನಿಂಗಪ್ಪ ಮೊರಬದ, ಗಾಳೆಪ್ಪ ದ್ವಾಸಲಕೇರಿ, ನಿಂಗಪ್ಪ ರಾಮಯ್ಯನವರ, ದತ್ತಪ್ಪ ಆಪುಸಪೇಟ, ರಾಜು ನಾಗರಾಳ, ಕನಕಪ್ಪ ಕೊಟಬಾಗಿ, ದೊಡ್ಡಪ್ಪ ವಂದಲ, ವಿಜಯಕುಮಾರ ಗಬ್ಬೂರ, ಆನಂದ ಬಾವೂರ, ಸುನೀಲ ದೊಡ್ಡಮನಿ, ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.