ಶಿರಹಟ್ಟಿ ಗ್ರಾಮದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ಜನರನ್ನು ತಪಾಸಣೆ ಮಾಡಿದ ಡಾ. ಚಂದ್ರಕಾಂತ ದೂಳಶೆಟ್ಟಿ. ರಾಮಗೊಂಡ ಪಾಟೀಲ, ಶಿವಾನಂದ ಮೆಣಸಂಗಿ ಇತರರು ಇದ್ದರು.  
ಜಿಲ್ಲೆ

ಹೊರ ರಾಜ್ಯದಿಂದ ಬಂದವರ ತಪಾಸಣೆ

ಕೊಕಟನೂರ: ಹೊರ ರಾಜ್ಯ ಹಾಗೂ ಪಾದಯಾತ್ರೆ ಮೂಲಕ ಶ್ರೀಶೈಲ ಕ್ಷೇತ್ರಕ್ಕೆ ಹೋಗಿ ಬಂದ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮದ ಜನರನ್ನು ಮಂಗಳವಾರ ಕೊಕಟನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಕಾಂತ ದೂಳಶೆಟ್ಟಿ ತಪಾಸಣೆ ನಡೆಸಿದರು.

ಕೊಕಟನೂರ, ಯಲ್ಲಮ್ಮನವಾಡಿ, ಸುಟ್ಟಟ್ಟಿ, ಕಟಗೇರಿ, ಝುಂಜರವಾಡ, ಶಿರಹಟ್ಟಿ ಗ್ರಾಮಗಳಿಗೆ ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆದು ಬಂದಿರುವವರನ್ನು ಮತ್ತು ನೆರೆಯ ಮಹಾರಾಷ್ಟ್ರದಿಂದ ಬಂದಿರುವ ಸುಮಾರು ನೂರಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಯಿತು. ಡಾ. ಚಂದ್ರಕಾಂತ ದೂಳಶೆಟ್ಟಿ ಮಾತನಾಡಿ, ಗ್ರಾಮ ಹಾಗೂ ಮನೆಯ ಸುತ್ತ-ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ಮನೆ ಬಿಟ್ಟು ಹೊರಗೆ ಯಾರೂ ಬರಬಾರದು ಎಂದು ತಿಳಿಸಿದರು. ಸಿಬ್ಬಂದಿ ರಾಮಗೊಂಡ ಪಾಟೀಲ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಾನಂದ ಮೆಣಸಂಗಿ, ಕಲ್ಮೇಶ ಕಲಮಡಿ, ಕಟಗೇರಿ ಗ್ರಾಪಂ ಅಧ್ಯಕ್ಷ ರಾಜಕುಮಾರ ಪೂಜಾರಿ, ಪಿಡಿಒ ಬಿ.ಎಚ್. ಬಳೋಜಿ ಇತರರು ಇದ್ದರು.