ಜಿಲ್ಲೆ

ವಿದ್ಯುತ್ ಬಿಲ್ ನೀಡದ್ದಕ್ಕೆ ಆಕ್ರೋಶ

ಪ್ರಶಾಂತ ಹೂಗಾರ

ಅಥಣಿ: ಹೆಸ್ಕಾಂನಿಂದ ಲೈಟಿಂಗ್ ಸಂಪರ್ಕ, ವಾಣಿಜ್ಯ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಮೀಟರ್ ಅಳವಡಿಸಿ ಬಿಲ್ ನೀಡದಿರುವುದಕ್ಕೆ ಪಟ್ಟಣದ ಕೆಇಬಿ ಎದುರು ಗುತ್ತಿಗೆದಾರರು ಈಚೆಗೆ ಪ್ರತಿಭಟಿಸಿದರು.

ಅಥಣಿ ಹೆಸ್ಕಾಂ ಇಲಾಖೆಯಲ್ಲಿ ಗುತ್ತಿಗೆದಾರರು ಪ್ರತಿಭಟಿಸಿದರು. ದೀಪಕ ರಾಥೋಡ, ನಫೀಜಾ ಬಡಕಲ್, ಜಿ,ಜೆ,ಅವಟಿ, ಜಗದೀಶ ಅವಟಿ, ಅನಿಲ ಒಡೆಯರ ಇತರರಿದ್ದರು.

ಹೆಸ್ಕಾಂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗದೀಶ ಅವಟಿ ಮಾತನಾಡಿ, ಕಳೆದ ಆರು ತಿಂಗಳಿನಿಂದ ಅಕಾರಿಗಳು ಸಾರ್ವಜನಿಕರಿಗೆ ಸಮರ್ಪಕ ಕೆಲಸ ಮಾಡಿಕೊಡುತ್ತಿಲ್ಲ. ಲೈಟಿಂಗ್ ಸಂಪರ್ಕ, ತಾತ್ಕಾಲಿಕ ವಿದ್ಯುತ್ ಸಂಪರ್ಕ, ವಾಣಿಜ್ಯ ಮತ್ತು ಹೊಸ ಕಟ್ಟಡಗಳಿಗೆ ಮೀಟರ್ ಅಳವಡಿಸಿ ಗ್ರಾಹಕರಿಗೆ ಬಿಲ್ ನೀಡುತ್ತಿಲ್ಲ. ಹೀಗಾಗಿ ಸರ್ಕಾರದ ಗೃಹಜ್ಯೋತಿ ಸೌಲಭ್ಯ ದೊರಕುತ್ತಿಲ್ಲ. ತಾಂತ್ರಿಕ ಸಮಸ್ಯೆ ನಿವಾರಿಸುವಂತೆ ಅಕಾರಿಗಳಿಗೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕೋಡಿ ಹೆಸ್ಕಾಂ ಉಪವಿಭಾಗದ ಮುಖ್ಯ ಅಭಿಯಂತ ದೀಪಕ ರಾಥೋಡ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಅಕಾರಿಗಳಿಗೆ ಇಲಾಖೆಯ ಫೈಲ್‌ಗಳು ಬಾಕಿ ಉಳಿಯದಂತೆ ಸೂಚಿಸಿದರು. ಗುತ್ತಿಗೆದಾರರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು. ಹೆಸ್ಕಾಂ ಅಕಾರಿ ಜಿ.ಜೆ.ಅವಟಿ, ಸಹಾಯಕ ಅಭಿಯಂತೆ ನಫೀಜಾ ಬಡಕಲ್, ಅನಿಲ ಒಡೆಯರ, ಭೀಮನಗೌಡ ಪಾಟೀಲ, ಅನಿಲ ಹವಾಲ್ದಾರ, ಕೃಷ್ಣ ಲಂಗೋಟಿ ಇತರರಿದ್ದರು.