ಮುಂಡಗೋಡ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ವಾಹನ ಸಂಚಾರ ತಡೆದು ಪಟ್ಟಣದ ಶಿವಾಜಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಹೆಚ್ಚಿಗೆ ಮಾಡಿದ್ದು, ಇದರಿಂದ ಬಡ ಜನರಿಗೆ ಹೊರೆಯಾಗುತ್ತಿದೆ. ಬೆಲೆ ಏರಿಕೆ ಮಾಡಿರುವ ಕ್ರಮ ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಐದು ಗ್ಯಾರಂಟಿ ಯೋಜನೆಗಳನ್ನು ನಡೆಸಲು ಸಾಧ್ಯವಾಗದ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಗೆ ಮಾಡಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಬಿಜೆಪಿ ಮುಖಂಡ ಎಲ್.ಟಿ. ಪಾಟೀಲ ಆಗ್ರಹಿಸಿದರು. ಎತ್ತಿನ ಚಕ್ಕಡಿ ತಂದು ಅದರಲ್ಲಿ ಬೈಕ್ ನಿಲ್ಲಿಸಿ ಇಪ್ಪತ್ತು ನಿಮಿಷಗಳ ಕಾಲ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ ಪಾಟೀಲ, ಬಸವರಾಜ ತನಿಖೆದಾರ್, ಸಿ.ಕೆ. ಅಶೋಕ, ರೇಖಾ ಅಂಡಗಿ, ಗುರು ಕಾಮತ್, ಸುನೀಲ ವೆರ್ಣೆಕರ, ಪ್ರಕಾಶ ಬಡಿಗೇರ, ಪಿ.ಜಿ. ತಂಗಚ್ಚನ್, ಶಂಕರ ಲಮಾಣಿ, ವಿಶ್ವನಾಥ ನಾಯರ್, ನಾಗರಾಜ ಬೆಣ್ಣಿ, ಬಾಬುರಾವ್ ವಾಲ್ಮೀಕಿ, ಸುರೇಶ ಕಲ್ಲೋಳ್ಳಿ, ಸಂತೋಷ ವರಕ್, ಮಂಜುನಾಥ ರೇವಣಕರ, ಮಂಜುನಾಥ ಶೇಟ್ ಇದ್ದರು.