ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಭೆ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿದರು. ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪ, ಜಿ.ಚಂದ್ರಣ್ಣ ಇತರರು ಇದ್ದರು. 
ಜಿಲ್ಲೆ

ದುಬಾರಿ ದುನಿಯಾ ಆಡಳಿತ ವೈಖರಿಗೆ ಆಕ್ರೋಶ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೇವನಹಳ್ಳಿ: ಪ್ರಜಾಪ್ರಭುತ್ವದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ ಸರ್ವರಿಗೂ ಸಮಪಾಲುಮ ಸಮಬಾಳು ಎಂಬ ಆಶಯದಡಿ ಆಡಳಿತ ನಡೆಸಬೇಕು, ಆದರೆ ಇಂದಿನ ಆಡಳಿತ ವರ್ಗ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಹೊರತುಪಡಿಸಿ ಕೆಲವು ಸೀಮಿತ ಸಮುದಾಯಗಳ ಅಲ್ಪಸಂಖ್ಯಾತರ ಅಭಿವೃದ್ಧಿಯತ್ತ ಗಮನಹರಿಸುವ ಮೂಲಕ ಮತ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ದುಬಾರಿ ದುನಿಯಾ ನೀತಿ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಬುಧವಾರ ಬೆಂಗಳೂರು ವಿಭಾಗದಿಂದ 5 ಜಿಲ್ಲೆಗಳ ವತಿಯಿಂದ ಹಮ್ಮಿಕೊಂಡಿರುವ ಬೃಹತ್​ ಪ್ರತಿಭಟನೆ ಪೂರ್ವಭಾವಿಯಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬುಧವಾರದಿಂದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮೊದಲ ಹಂತವಾಗಿ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲಾ ಬಿಜೆಪಿಯಿಂದ ದೊಡ್ಡಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್​.ಎಂ ರವಿಕುಮಾರ್​ ಮಾತನಾಡಿ, ರಾಜ್ಯದ ಪ್ರತಿ ಮಂಡಲದಿಂದ ಕನಿಷ್ಠ 20 ಬಸ್​ಗಳ ಮೂಲಕ ಪ್ರತಿಭಟನೆಗೆ ತೆರಳುತ್ತಿದ್ದೇವೆ. ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದರೂ ಅವರ ಗ್ಯಾರಂಟಿ ಯೋಜನೆಗಳ ಪೂರೈಸುವಲ್ಲಿ ನಿರತರಾಗಿದ್ದಾರೆಯೇ ಹೊರತು ರಾಜ್ಯದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿಲ್ಲ ಎಂದರು.

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಸಂವಿಧಾನ ತಿದ್ದುಪಡಿ ಮಾಡಿ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.4 ಮೀಸಲಾತಿ ನೀಡಲು ಮುಂದಾಗಿರುವುದರ ವಿರುದ್ಧವೂ ಪ್ರತಿಭಟನೆ ನಡೆಸಲಾಗುವುದು, ದೇವನಹಳ್ಳಿ ೇತ್ರದಲ್ಲಿ ಕಳೆದ 2 ವರ್ಷಗಳಿಂದ ಒಂದು ಸಾಸಿವೆ ಕಾಳಿನಷ್ಟು ಹೊಸ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬದಲಿಗೆ ಮುಸ್ಲಿಮರಿಗೆ ಶಾದಿ ಮಹಲ್​ ಕಟ್ಟಿಸಲು ಹೊರಟಿದ್ದಾರೆ ಈ ಭಾಗದ ಸಚಿವರು ಎಂದು ಆರೋಪಿಸಿದರು. ಮಾಜಿ ಶಾಸಕ ಜಿ.ಚಂದ್ರಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ನೀಲೇರಿ ಅಂಬರೀಶಗೌಡ, ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್​, ಮುಖಂಡರಾದ ದೇಸೂ ನಾಗರಾಜ್​, ಭಗವಾನ್​, ಟೌನ್​ ಅಧ್ಯಕ್ಷ ಅನಿಲ್​ ಯಾದವ್​, ಸುರೇಶ್​ಆಚಾರ್​, ಕೇಶವ, ಸುನಿಲ್​, ಪ್ರಭು, ಭಗವಾನ್​ ಆರ್​. ಪುನೀತ, ಜಿ.ಕೇಶವ, ಆರ್​.ಕೆ.ನಂಜೇಗೌಡ ಇದ್ದರು.

ಕಾಂಗ್ರೆಸ್​ ಸರ್ಕಾರದ ದುರಾಡಳಿತ ಮಿತಿ ಮೀರಿದೆ. ಇವರ ನಾಮ್​ಕೇವಾಸ್ತೆ ಗ್ಯಾರಂಟಿಗಳಿಂದಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಬಡ ಜನರಿಗೆ ಅನುಕೂಲವಾಗುವ ಯಾವುದೇ ರ್ನಿಣಯ ತೆಗೆದುಕೊಳ್ಳಲಾಗಿಲ್ಲ. > ಅಂಬರೀಶ್​ ಗೌಡ ಬಿಜೆಪಿ ತಾಲೂಕು ಅಧ್ಯಕ್ಷ