ಮುಂಡರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಮಾನಕರ ಭಾಷಣ ಮಾಡಿದ ಅಮಿತ್‌ಷಾ ಅವರ ಸಚಿವ ಸ್ಥಾನ ರದ್ದು ಮಾಡಿ ಭಾರತದ ಪೌರತ್ವ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ, ದಲಿತ ಸಂಘರ್ಷ ಸಮಿತಿ, ನಮ ಕರವೇ ಮತ್ತಿತರರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಪಟ್ಟಣದ ಕೊಪ್ಪಳ ಸರ್ಕಲ್‌ನಲ್ಲಿ ಕೆಲಕಾಲ ಹೆದ್ದಾರಿ ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದ ಮುಖ್ಯಸ್ಥ ನಿಂಗರಾಜ ಹಾಲಿನವರ ಮಾತನಾಡಿ, ಅಮಿತ್‌ಷಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು’ ಎಂದರು.
ಬಸವರಾಜ ನವಲಗುಂದ, ಚಂದ್ರು ಪೂಜಾರ ಮಾಡಿದರು. ಲಕ್ಷ್ಮಣ ತಗಡಿನಮನಿ, ಅಡಿವೆಪ್ಪ ಚಲವಾದಿ, ಕಿರಣ ಹಾಲಿನವರ, ರೈಮಾನಸಾಬ ಒಂಟಿ, ಶಿವಪ್ಪ ಪೂಜಾರ, ಡಿ.ವೈ.ದೊಡ್ಡಮನಿ, ಇತರರು ಇದ್ದರು.