filter: 0; fileterIntensity: 0.0; filterMask: 0; captureOrientation: 0; hdrForward: 0; highlight: true; algolist: 0; multi-frame: 1; brp_mask:8; brp_del_th:0.0190,0.0000; brp_del_sen:0.1000,0.0000; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 30; 
ಜಿಲ್ಲೆ

ಪಿಡಿಒ, ಬಿಲ್ ಕಲೆಕ್ಟರ್ ವಿರುದ್ಧ ಆಕ್ರೋಶ

ಶ್ರವಣಬೆಳಗೊಳ: ಹೋಬಳಿಯ ದಮ್ಮನಿಂಗಳ ಗ್ರಾಮದಲ್ಲಿ ಬುಧವಾರ ನಡೆದ ಕೊಲೆಗೆ ದಮ್ಮನಿಂಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ಶುಕ್ರವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಇದೇ ವಿಷಯವಾಗಿ ಗುರುವಾರ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ ಸಂಬಂಧಪಟ್ಟವರನ್ನು ಪಿಡಿಒ ಮಂಜೇಗೌಡ ಹಾಗೂ ಬಿಲ್ ಕಲೆಕ್ಟರ್ ಜಯರಾಮ್ ಅವರನ್ನು ಅಮಾನತು ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಭೇಟಿ ನೀಡಿ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಹೊರಟರು. ಇದಕ್ಕೆ ಸಮಾಧಾನಗೊಳ್ಳದ ಪ್ರತಿಭಟನಾಕಾರರು ನ್ಯಾಯ ಸಿಗುವವರೆಗೂ ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.


ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡರ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದ್ದು, ಮೀಸೆ ಮಂಜಣ್ಣ, ದಡಿಘಟ್ಟ ಮಂಜಣ್ಣ, ರಂಗಸ್ವಾಮಿ, ಜಯಲಕ್ಷ್ಮಮ್ಮ, ಶಿವು, ನಾಗರಾಜ್, ಗ್ರಾಮಸ್ಥರಾದ ಕುಮಾರ್, ಪರಮೇಶ್, ಮನೋಜ್, ರಾಜೇಶ್, ಬಾಬು, ಉತ್ತೇನಹಳ್ಳಿ ಸಾಗರ್‌ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಮುಂದುವರಿದ ಅಹೋರಾತ್ರಿ ಪ್ರತಿಭಟನೆ
ಶ್ರವಣಬೆಳಗೊಳ:
ಹೋಬಳಿಯ ದಮ್ಮನಿಂಗಳ ಗ್ರಾಮದಲ್ಲಿ ನಡೆದ ಕೊಲೆಗೆ ಗ್ರಾಮ ಪಂಚಾಯಿತಿ ಪಿಡಿಒ ಮಂಜೇಗೌಡ ಹಾಗೂ ಬಿಲ್ ಕಲೆಕ್ಟರ್ ಜಯರಾಮ್ ಅವರು ಮಾಡಿರುವ ಅವ್ಯವಹಾರವೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ಶುಕ್ರವಾರದಿಂದ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದೆ.
ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಠಾಣಾ ಎಆರ್ ನಂ.60 ರಲ್ಲಿರುವ ಜಾಗವು ಕೊಲೆಯಾದ ದಯಾನಂದ್ ಅವರ ತಾಯಿ ಜಯಮ್ಮ ಅವರ ಹೆಸರಿನಲ್ಲಿದ್ದು, ಅದೇ ಜಾಗವನ್ನು ಕೊಲೆ ಆರೋಪಿ ವರುಣ್ ಅವರ ಹೆಸರಿಗೆ ಪಿಡಿಒ ಹಾಗೂ ಬಿಲ್ ಕಲೆಕ್ಟರ್ ಸೇರಿ ಖಾತೆ ಮಾಡಿದ ಪರಿಣಾಮ ಇಬ್ಬರಲ್ಲಿ ವೈಷಮ್ಯ ಬೆಳೆಯಲು ಕಾರಣವಾಗಿತ್ತು. ಇದು ಕೊಲೆ ಮಾಡುವ ಹಂತಕ್ಕೆ ತಲುಪಿ ಭೀಕರ ಕೃತ್ಯ ನಡೆದಿದೆ. ಅಲ್ಲದೆ ಪಂಚಾಯಿತಿಯಲ್ಲಿ ಹಲವಾರು ಅವ್ಯವಹಾರ ನಡೆದಿದ್ದು, ಸೂಕ್ತ ಕ್ರಮ ಜರುಗಿಸಬೇಕು ಎಂದು ಪಟ್ಟುಹಿಡಿದರು.
ಇಒ ಹರೀಶ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಈ ಪ್ರಕರಣದ ತನಿಖೆ ನಡೆಸಲು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್, ಅಕ್ಷರ ದಾಸೋಹ ಉಪ ನಿರ್ದೇಶಕ ಚಲುವನಾರಾಯಣಸ್ವಾಮಿ ಹಾಗೂ ಹರೀಶ್ ಒಳಗೊಂಡಂತೆ ಮೂವರು ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, 7 ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.