ಹಗರಿಬೊಮ್ಮನಹಳ್ಳಿ ಹರ ದೇಗುಲದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಂಚಮಸಾಲಿ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ ಮಾತನಾಡಿದರು. ಸಮುದಾಯದ ಪ್ರಮುಖರಾದ ಬಾವಿಬೆಟ್ಟಪ್ಪ, ಹನಸಿ ಸಿದ್ದೇಶ, ವೈ.ಮಲ್ಲಿಕಾರ್ಜುನ,ಮಂಜುನಾಥ ಗೌಡ ಇತರರಿದ್ದರು. 
ಜಿಲ್ಲೆ

ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ

ಹಗರಿಬೊಮ್ಮನಹಳ್ಳಿ: ಬೆಳಗಾವಿ ಸುವರ್ಣಸೌಧದ ಮುಂದೆ ನಡೆದಿದ್ದ ಪಂಚಮಸಾಲಿ ಸಮುದಾಯದ ಹೋರಾಟದ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ಡಿ.12ರಂದು ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ ಬುಧವಾರ ಹೇಳಿದರು.

ಪಟ್ಟಣದ ಹರ ದೇಗುಲದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ಹೊರ ಹಾಕಲು ಸಮಾಜದ ಎಲ್ಲರೂ ಭಾಗವಹಿಸಬೇಕು. ಪಟ್ಟಣದ ರಾಮನಗರದಲ್ಲಿರುವ ಈಶ್ವರ ದೇಗುದಲದಿಂದ ಬೆಳಗ್ಗೆ ಪ್ರತಿಭಟನೆ ಆರಂಭವಾಗಿ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.

ಬೆಣಕಲ್ ಪ್ರಕಾಶ, ನಟರಾಜ ಬದಾಮಿ, ಡಾ.ಕುಮಾರ ನೆಲ್ಕುದ್ರಿ, ಶಿಕ್ಷಕರದಾ ಉತ್ತಂಗಿ ರವಿ, ರವಿಂದ್ರ ಬಾವಿ, ರವಿ, ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ವೀರೇಶ, ನಿವೃತ್ತ ಶಿಕ್ಷಕ ಕೊಟ್ರಗೌಡ ಇತರರಿದ್ದರು.