ಜಿಲ್ಲೆ

ಕಾಂಗ್ರೆಸ್​ ಹೈಕಮಾಂಡ್​ ವಿರುದ್ಧ ಆಕ್ರೋಶ

ತುಮಕೂರು ಡೆಸ್ಕ್

ಪಾವಗಡ: ಕೆ.ಎನ್​.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ವಾಲ್ಮೀಕಿ ಸಮುದಾಯ, ಅಹಿಂದ ಒಕ್ಕೂಟ, ದಲಿತಪರ ಒಕ್ಕೂಟ ಹಾಗೂ ಕೆ.ಎನ್​.ರಾಜಣ್ಣ ಅಭಿಮಾನಿ ಬಳಗದಿಂದ ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟಿಸಿ, ಕಾಂಗ್ರೆಸ್​ ಹೈಕಮಾಂಡ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ವಾಲ್ಮೀಕಿ ಸಮುದಾಯ,ಕೆ.ಎನ್​.ಆರ್​ ಅಭಿಮಾನಿಗಳು ನಿರೀಕ್ಷಣಾ ಮಂದಿರದಲ್ಲಿ ಜಮಾವಣೆಗೊಂಡು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕಾಂಗ್ರೆಸ್​ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆದು ಪ್ರತಿಭಟಿಸಿದರು.

ನಂತರ ತಾಲೂಕು ಕಚೇರಿ ಆವರಣಕ್ಕೆ ಬಂದು ಕೆ.ಎನ್​ ರಾಜಣ್ಣ ಅವರನ್ನು ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿ, ತಹಸೀಲ್ದಾರ್​ ಡಿ.ಎನ್​.ವರದರಾಜು ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ವಾಲ್ಮೀಕಿ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಪಾಳೇಗಾರ ಲೋಕೇಶ್​ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ ನೇತಾರರು, ಪಕ್ಷತಿತ ನಾಯಕರು, ಸಹಕಾರಿ ಧುರೀಣರಾಗಿರುವ ರಾಜಣ್ಣ ಅವರನ್ನು ಯಾವುದೇ ನೋಟಿಸ್​ ನೀಡದೇ ಏಕಾಏಕಿ ಸಂಪುಟದಿಂದ ವಜಾಗೊಳಿಸಿರುವುದು ಖಂಡನೀಯ ಎಂದರು.

ಕೆಒಎಪ್​ ನಿರ್ದೇಶಕ ಅಂಜಿನಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ರೈತ ಮುಖಂಡ ನರಸಿಂಹರೆಡ್ಡಿ, ವಕೀಲ ನರಸಿಂಹ ಕೃಷ್ಣ, ನಾರಾಯಣಮೂರ್ತಿ, ಡಿಸಿಸಿ ಶ್ರೀನಿವಾಸ್​, ಓಂಕಾರ್​ ನಾಯಕ, ಲಕ್ಷಿ$್ಮ ನಾರಾಯಣ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.