ಹಾನಗಲ್ಲ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಮೀಪದ ಹಾವಣಗಿ ಗ್ರಾಪಂಗೆ ಸದಸ್ಯರ ಒಕ್ಕೂಟ ಹಾಗೂ ಹಾವಣಗಿ ಗ್ರಾಮಸ್ಥರು ಮಂಗಳವಾರ ಬೀಗ ಜಡಿದು ಪ್ರತಿಭಟಿಸಿದರು.
ಕೇಂದ್ರ ಸರ್ಕಾರದಿಂದ ನೀಡುವ 15ನೇ ಹಣಕಾಸು ಅನುದಾನವನ್ನು ರಾಜ್ಯ ಸರ್ಕಾರ ತನಗೆ ಅನುಕೂಲವಾಗುವಂತೆ ಹಂಚಿಕೆ ವಾಡುತ್ತಿದೆ. ಗ್ರಾಪಂನಲ್ಲಿ ಕಡಿಮೆ ಸದಸ್ಯರಿದ್ದರೂ ಹೆಚ್ಚು ಅನುದಾನ ನೀಡಲಾಗಿದೆ. ಪಿಡಿಒಗಳು ಅಧಿಕಾರ ದುರ್ಬಳಕೆ ವಾಡಿಕೊಂಡು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗೆ ಬೇಕಾದಂತೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ನಿರ್ಣಯ ತಿರಸ್ಕರಿಸುತ್ತಿದ್ದಾರೆ. ಅನೇಕ ಗ್ರಾಪಂಗಳಲ್ಲಿ ಒಬ್ಬರೇ ಪಿಡಿಒ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ರೈತರ ಹೊಲಗಳಿಗೆ ಯೋಗ್ಯ ರಸ್ತೆಗಳಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ಬಡವರಿಗೆ ಆಶ್ರಯ ಮನೆಗಳ ಪಟ್ಟಾ ವಿತರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ರೇಣುಕಾ, ತಾಪಂ ಇಒ ಪರಶುರಾಮ ಪೂಜಾರ, ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಪಂ ಅಧ್ಯಕ್ಷೆ ಶಿಲ್ಪಾ ಪದ್ಮೋಜಿ, ಉಪಾಧ್ಯಕ್ಷ ಜಗದೀಶ ಯಲಿಗಾರ, ವಾಜಿ ಶಾಸಕ ಶಿವರಾಜ ಸಜ್ಜನರ, ಬಸವರಾಜ ಹಾದಿಮನಿ, ಪದ್ಮನಾಭ ಕುಂದಾಪುರ, ಶಿವಲಿಂಗಪ್ಪ ತಲ್ಲೂರ, ನಿಜಲಿಂಗಪ್ಪ ಮುದಿಯಪ್ಪನವರ, ಉದಯಕುವಾರ ವಿರುಪಣ್ಣನವರ, ರಾಮನಗೌಡ ಪಾಟೀಲ, ಸಿದ್ದಲಿಂಗಪ್ಪ ಕಮಡೊಳ್ಳಿ, ಸಚಿನ್ ರಾಮಣ್ಣನವರ, ಮಹೇಶ ಬಣಕಾರ, ಮಹೇಶ ಜವಳಿ, ಆನಂದ ಹವಳಣ್ಣನವರ, ಮಲ್ಲಣ್ಣ ಕುರಬರ, ನಾಗರಾಜ ಪಾಟೀಲ, ರಮೇಶ ಕಳಸೂರ, ಸಂತೋಷ ಭಜಂತ್ರಿ, ಕರಬಸಪ್ಪ ಹೆಬ್ಬಳ್ಳಿ, ಈರಣ್ಣ ಕೋಡಿಹಳ್ಳಿ, ಪಾಂಡುರಂಗ ತೊಂಡೂರ, ರವಿ ಹರಕುಣಿ, ಲೀಲಾ ಜವಳಿ ಇತರರಿದ್ದರು.