ಜಿಲ್ಲೆ

ನಮ್ಮ ನಡಿಗೆ ಮತಗಟ್ಟೆಯ ಕಡೆಗೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ತಾಪಂ., ತಾಲೂಕು ಸ್ವೀಪ್​ ಸಮಿತಿ ಹಾಗೂ ಅಮ್ಮಿನಬಾವಿ ಗ್ರಾಪಂ ಆಶ್ರಯದಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಎಲ್ಲ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಮ್ಮ ನಡಿಗೆ ಮತಗಟ್ಟೆಯ ಕಡೆಗೆ ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಗಿತ್ತು.
ತಾಪಂ ಇಒ ಸುಭಾಷ ಸಂಪಗಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ನಮ್ಮ ದೇಶದ ಸಾರ್ವತ್ರಿಕ ಚುನಾವಣೆಗಳನ್ನು ಅವಲಂಬಿಸಿದೆ. ದೇಶದ ಪ್ರತಿ ಪ್ರಜೆಯೂ ಆಮಿಷಗಳಿಗೆ ಬಲಿಯಾಗದೆ ತನಗೆ ಸಂವಿಧಾನ ಬದ್ಧ ಪ್ರಾಪ್ತವಾಗಿರುವ ಮತಾಧಿಕಾರವನ್ನು ಯೋಗ್ಯ ಅಭ್ಯಥಿರ್ಗಳ ಆಯ್ಕೆಗೆ ಚಲಾಯಿಸಬೇಕು. ಹೀಗಾಗಿ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಸ್ವಯಂ ಸ್ಫೂತಿರ್ಯಿಂದ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಉದ್ಯೋಗದ ಸಹಾಯಹ ನಿರ್ದೇಶಕ ಚಂದ್ರು ಪೂಜಾರ, ಅಮ್ಮಿನಭಾವಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಡಿ. ಚವರೆಡ್ಡಿ ಹಾಗೂ ತಾಪಂ ವ್ಯವಸ್ಥಾಪಕ ಎಂ.ಜಿ. ಹರಿಹರ ಮಾತನಾಡಿದರು.
ನರೇಗಾ ಯೋಜನೆ, ತಾಪಂ ಕಚೇರಿ, ಅಮ್ಮಿನಬಾವಿ ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವಿವಿಧ ಸ್ವ&ಸಹಾಯ ಸಂಗಳ ಸದಸ್ಯರು ಗ್ರಾಮದಲ್ಲಿ ಪ್ರಭಾತ ಬೇರಿ ನಡೆಸಿ ಚುನಾವಣಾ ಪರ್ವ ದೇಶದ ಗರ್ವ ನಮ್ಮ ನಡಿಗೆ ಮತಗಟ್ಟೆ ಕಡೆಗೆ ಎಂಬ ಮತದಾನದ ಜಾಗೃತಿ ಮೂಡಿಸಿದರು.