ಜಿಲ್ಲೆ

ನಮ್ಮ ನಡಿಗೆ ಸರ್ವೋದಯದ ಕಡೆಗೆ ಪಾದಯಾತ್ರೆ 28ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಸರ್ವೋದಯ ಸಮುದಾಯ, ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದಿಂದ ಫೆ. 28ರಂದು ಧಾರವಾಡದಿಂದ ಗರಗವರೆಗೆ "ನಮ್ಮ ನಡಿಗೆ ಸರ್ವೋದಯದ ಕಡೆಗೆ' ಪಾದಯಾತ್ರೆ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವ ಕುಲಕರ್ಣಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 28ರಂದು ಬೆಳಗ್ಗೆ 7.30ಕ್ಕೆ ಇಲ್ಲಿನ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಪಾದಯಾತ್ರೆ ಆರಂಭವಾಗಲಿದೆ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಪ್ಪತಗುಡ್ಡದ ಶ್ರೀಗಳು, ಇತರರು ಪಾಲ್ಗೊಳ್ಳುವರು. ದಾರಿಯುದ್ದಕ್ಕೂ ಬೀದಿನಾಟಕ, ಕ್ರಾಂತಿ ಗೀತೆಗಳು, ಉಪನ್ಯಾಸ ನಡೆಯಲಿವೆ ಎಂದರು.

ನರೇಂದ್ರ, ಮಂಗಳಗಟ್ಟಿಯಲ್ಲಿ ಜಾಗೃತಿ ಸಭೆ ನಡೆಸಲಾಗುವುದು. ಪಾದಯಾತ್ರೆಯು ಮಧ್ಯಾಹ್ನ 2.30ಕ್ಕೆ ಗರಗ ತಲುಪಲಿದ್ದು, ಖಾದಿ ಗ್ರಾಮೋದ್ಯೋಗದ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಜನರಲ್ಲಿ ಪರಿಸರ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳೇನು? ಅವುಗಳಿಗೆ ಪರಿಹಾರಗಳೇನು? ಎಂಬುದರ ಕುರಿತು ಜನಾಭಿಪ್ರಾಯ ರೂಪಿಸಿ ಸರ್ಕಾರದ ಗಮನ ಸೆಳೆದು ಕ್ರಮ ಕೈಗೊಳ್ಳುವಂತೆ ಒತ್ತಡ ತರುವುದು ಪಾದಯಾತ್ರೆ ಉದ್ದೇಶವಾಗಿದೆ. ಸಮಾಜದಲ್ಲಿ ಒಳ್ಳೆಯ ಪರಿರ್ವತನೆ ಬಯಸುವ ಎಲ್ಲ ನಾಗರಿಕರು, ಸಾಹಿತಿಗಳು, ಮಠಾಧೀಶರು, ಚಿಂತಕರು ವಿವಿಧ ಮತ, -ಧರ್ಮಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಶಂಕರ ಹಲಗತ್ತಿ, ಶ್ರೀಶೈಲ ಕಮತರ, ಇತರರು ಇದ್ದರು.