ಕೊಕ್ಕರ್ಣೆ: ಮಂದಾರ್ತಿಯಲ್ಲಿ ಜ.18ರಿಂದ 108 ತಂಡಗಳ ರಾಷ್ಟ್ರಮಟ್ಟದ ಕುಣಿತ ಭಜನೆ ಸ್ಪರ್ಧೆ ನಡೆಯಲಿದ್ದು, ಈ ಪ್ರಯುಕ್ತ ನೀಲಾವರದ ಮಹತೋಭಾರ ಶ್ರೀ ಮಹಿಷಮರ್ದಿನಿ ಕ್ಷೇತ್ರದಿಂದ ಶ್ರೀಕ್ಷೇತ್ರ ಮಂದಾರ್ತಿಗೆ ಭಜನಾ ತಂಡಗಳು ಹಾಗೂ ಭಕ್ತರಿಂದ ಪುಣ್ಯಪಾದ ನಮ್ಮ ನಡಿಗೆ ಅಮ್ಮನೆಡೆಗೆ ಕಾರ್ಯಕ್ರಮ ನಡೆಯಿತು.
ಶ್ರೀಕ್ಷೇತ್ರ ನೀಲಾವರದ ಆಡಳಿತ ಮೊಕ್ತೇಸರ ರಘುರಾಮ್ ಮಧ್ಯಸ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮುಖರಾದ ಸಖಾರಾಮ್ ಸೋಮಯಾಜಿ, ವಿಶ್ವನಾಥ್ ಶೆಟ್ಟಿ, ಹರೀಶ್ ಶಾನುಭಾಗ್, ಉಮೇಶ್ ಶೆಟ್ಟಿ, ಜಲಂಧರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಧೀರ್ ಶೆಟ್ಟಿ, ಅನೂಪ್, ರವೀಂದ್ರ ಹೇರೂರು ಉಪಸ್ಥಿತರಿದ್ದರು.
ಶ್ರೀ ಗೋಪಾಲಕೃಷ್ಣ ಆಂಜನೇಯ ಮಹಿಳಾ ಭಜನಾ ಮಂಡಳಿ ನಡೂರು, ಓಂಶ್ರೀ ಜಗನ್ಮಾತ ಭಜನಾ ಮಂಡಳಿ ಶಿರಿಯಾರ, ಶ್ರೀ ವಿನಾಯಕ ಕಲಾ ಭಜನಾ ಮಂಡಳಿ ಪ್ರಗತಿನಗರ, ಕಲ್ಗುಂಡಿ ಮಹಾಗಣಪತಿ ಭಜನಾ ಮಂಡಳಿ, ಮಂದಾರ್ತಿ ಶ್ರೀರಾಮ ಭಜನಾ ಮಂಡಳಿ ಸಹಿತ ಭಕ್ತರು ಭಜನೆಯಲ್ಲಿ ಭಾಗವಹಿಸಿದ್ದರು. ಮಂದಾರ್ತಿ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಉದಯ್ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ರವೀಂದ್ರ ಹೇರೂರು ವಂದಿಸಿದರು.