ದೇವರಹಿಪ್ಪರಗಿ: ಜೀವನದಲ್ಲಿ ಧರ್ಮ ಮತ್ತು ನೀತಿ ಅಳವಡಿಸಿಕೊಂಡಾಗ ಸನ್ಮಾರ್ಗದತ್ತ ತೆರಳಲು ಸಾಧ್ಯ ಎಂದು ಪ್ರವಚನಕಾರ ಶಿವಲಿಂಗಯ್ಯ ಶರಣರು ಪುರಾಣಿಕಮಠ ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶ್ರೀದಾನಮ್ಮಾದೇವಿ ಕಾರ್ತಿಕ 5ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆರಂಭಗೊಂಡ ಪುರಾಣ ಕಾರ್ಯಕ್ರಮದಲ್ಲಿ ಗುರುವಾರ ಪ್ರವಚನ ನೀಡಿದ ಅವರು, ಭಕ್ತಿ ಎಂಬ ಭಾವ ದೊಡ್ಡದು. ಎಂದಿಗೂ ನಾವು ನಮ್ಮ ಮೂಲವನ್ನು ಮರೆಯಬಾರದು ಎಂದರು.
ನ.25 ರಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶ್ರೀಗಳು ಆಗಮಿಸಲಿದ್ದಾರೆ. ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವ ಮಹಾಂತಶ್ರೀಗಳಿಂದ ಲ ದೀಪೋತ್ಸವ ಉದ್ಘಾಟನೆಯಾಗಲಿದೆ. ಈ ಎಲ್ಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗಿಯಾಗುವಂತೆ ಕರೆ ನೀಡಿದರು.
ಜಂಗಮಾಭಿವೃದ್ಧಿ ಸಂದ ತಾಲೂಕು ಅಧ್ಯ ಸೋಮಶೇಖರ ಹಿರೇಮಠ, ಕಲ್ಯಾಣ ಮಂಟಪದ ಅಧ್ಯ ಬಸಯ್ಯ ಮಲ್ಲಿಕಾರ್ಜುನಮಠ, ಶಾಂತಗೌಡ ಬಿರಾದಾರ(ಯರನಾಳ), ಗೊಲ್ಲಾಳಪ್ಪಗೌಡ ಪಾಟೀಲ, ಅಶೋಕ ಬಬಲೇಶ್ವರ, ಉಮಾಕಾಂತ ಸೊನ್ನದ, ಬಂಡೆಪ್ಪ ಬಿರಾದಾರ(ದಿಂಡವಾರ), ಸಂಗೀತಗಾರ ಶಿವಯ್ಯ ಜೇರಟಗಿ, ತಬಲಾವಾದಕ ಸಾಹೇಬಗೌಡ ಮುಳಸಾವಳಗಿ ಇದ್ದರು.