ತಿಕೋಟಾದಲ್ಲಿ ಮತದಾನ ಜಾಗೃತಿ ಜಾಥಾ ನಡೆಯಿತು. ತಾಪಂ ಇಒ ಪ್ರವಿಣಕುಮಾರ ಸಾಲಿ, ಪಪಂ ಮುಖ್ಯಾಧಿಕಾರಿ ಬಿ.ಆರ್​.ಶಿಂಗೆ ಇತರರಿದ್ದರು. 
ಜಿಲ್ಲೆ

ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ

ಗಿರೀಶ ಸಗರ

ತಿಕೋಟಾ: ಪಟ್ಟಣದಲ್ಲಿ ತಾಲೂಕು ಸ್ವೀಪ್​ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದೊಂದಿಗೆ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ನಡೆಯಿತು.

ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವಿಣಕುಮಾರ ಸಾಲಿ ಧ್ವಜಾರೋಹಣ ನೆರವೇರಿಸಿದರು. ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮತದಾನ ಜಾಗೃತಿ ಜಾಥಾ ಮಾಡಲಾಯಿತು. ಪಪಂ ಮುಖ್ಯಾಧಿಕಾರಿ ಬಿ.ಆರ್​.ಶಿಂಗೆ, ಸಿಬ್ಬಂದಿ, ತಾಲೂಕು ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.