ಕಂಪ್ಲಿ: ಅಳಿವಿನಂಚಿನಲ್ಲಿರುವ ಗರಡಿ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಪ್ರಗತಿಪರ ಸಂಘಟನೆಗಳು ಶ್ರಮಿಸಬೇಕಿದೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಯುವ ಸೈನ್ಯ) ಅಧ್ಯಕ್ಷ ಯು. ಹನುಮೇಶ್ ಹೇಳಿದರು.
ಶ್ರೀಪೇಟೆ ಬಸವೇಶ್ವರ ನೀಲಮ್ಮ ಜೋಡಿ ರಥೋತ್ಸವ ನಿಮಿತ್ತ ಪಟ್ಟಣದ ಷಾ.ಮಿಯಾಚಂದ್ ಹೈಸ್ಕೂಲ್ ಆವರಣದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಮುಕ್ತ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಗರಡಿಯು ಗಂಡುಮೆಟ್ಟಿನ ಕಲೆಯಾಗಿದೆ. ಇದನ್ನು ಪೋಷಿಸಲು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಲಿ ಎಂದು ಒತ್ತಾಯಿಸಿದರು.
ನಮ್ಮ ಕರವೇ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ, ಜಿಲ್ಲಾಧ್ಯಕ್ಷ ಮಾರೆಪ್ಪ, ಉತ್ತರ ಕರ್ನಾಟಕದ ಅಧ್ಯಕ್ಷ ದುರುಗೇಶ್ ಉಪ್ಪಾರ, ಸಂಚಾಲಕ ನೀಲಕಂಠ, ಜಿಲ್ಲಾ ಕ್ರೀಡಾ ಅಧ್ಯಕ್ಷ, ಎ.ದುರುಗೇಶ್, ತಾಲೂಕು ಅಧ್ಯಕ್ಷ ಸಿ.ರಾಜಶೇಖರ್, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ಬಿ.ನಾರಾಯಣಪ್ಪ, ಕರವೇ ಸದಸ್ಯರಾದ ಶ್ರೀನಿವಾಸ್, ಗೋಪಿನಾಥ, ವೀರಭದ್ರ, ಮಾರುತಿ, ಉಸ್ತಾದ್‌ಗಳಾದ ಜಿ.ಕೋಟ್ರಯ್ಯ ಸ್ವಾಮಿ ವೀರೇಶ್, ಶಬ್ಬೀರ್, ಮಾರುತಿ ಇತರರಿದ್ದರು. ರಾಜ್ಯದ ವಿವಿಧ ಕಡೆಗಳಿಂದ 30 ಪಟುಗಳು ಭಾಗವಹಿಸಿದ್ದರು.