ಹುಬ್ಬಳ್ಳಿ: ನಾಗರ ಪಂಚಮಿ ನಿಮಿತ್ತ ಇಲ್ಲಿಯ ಉಣಕಲ್‌ನ ಶ್ರೀನಗರದಲ್ಲಿರುವ ಚೇತನ್ ಬಿಜಿನೆಸ್ ಸ್ಕೂಲ್‌ನಲ್ಲಿ ಇತ್ತೀಚೆಗೆ ಲಡ್ಡು ಉತ್ಸವ ಆಚರಿಸಲಾಯಿತು.
ಡಾ. ರಮಾಕಾಂತ ಕುಲಕರ್ಣಿ ಮಾತನಾಡಿ, ಜಗತ್ತು ಎಷ್ಟೇ ಮುಂದುವರಿದರೂ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಹಬ್ಬಗಳು ಇಂದಿಗೂ ಜೀವಂತ ಇವೆ. ಇದಕ್ಕೆ ಕಾರಣ ವೈಜ್ಞಾನಿಕ ತಳಹದಿ. ಆಯಾ ಋತುಮಾನಕ್ಕೆ ತಕ್ಕಂತೆ ಹಬ್ಬಗಳು ಬರುತ್ತವೆ. ಆ ವೇಳೆ ನಾವು ಸೇವಿಸುವ ಆಹಾರವು ನಮಗೆ ಆರೋಗ್ಯದ ಪಾಠ ಹೇಳಿಕೊಡುತ್ತದೆ ಎಂದರು.
ಎಲ್ಲ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ವಿವಿಧ ತರಹದ ಲಡ್ಡು ತಂದು ನಾಗಪ್ಪನಿಗೆ ಹಾಲೆರೆದು ಹಬ್ಬ ಆಚರಿಸಿದರು. ಅಲ್ಲದೇ ವಿವಿಧ ಲಡ್ಡುಗಳ ಪ್ರದರ್ಶನವೂ ನಡೆಯಿತು. ನಿರ್ದೇಶಕ ಡಾ. ವಿಶ್ವನಾಥ ಕೊರವಿ ಸೇರಿದಂತೆ ಇತರರು ಇದ್ದರು.