ಟೀಮ್ ಭವಾಬ್ಧಿ ವತಿಯಿಂದ ನಡೆದ ಗೋವಿನೆಡೆಗೆ ನಮ್ಮ ಕೊಡುಗೆ ಕಾರ್ಯಕ್ರಮದಲ್ಲಿ ಕೋಟೇಶ್ವರ ಹೂವಿನಕೆರೆ ಗೊಶಾಲೆಗೆ 500 ಕೆ.ಜಿ ಪಶು ಆಹಾರ ನೀಡಲಾಯಿತು 
ಜಿಲ್ಲೆ

ಪಡುಕರೆಯಲ್ಲಿ ಗೋವಿನೆಡೆಗೆ ನಮ್ಮ ಕೊಡುಗೆ

ಕೋಟ: ಕೋಟತಟ್ಟು ಪಡುಕರೆ ಟೀಮ್ ಭವಾಬ್ಧಿ ವತಿಯಿಂದ ಭಾನುವಾರ ನಡೆದ ಗೋವಿನೆಡೆಗೆ ನಮ್ಮ ಕೊಡುಗೆ ಪ್ರಯುಕ್ತ ಉಡುಪಿ ಕೃಷ್ಣಮಠದ ಸೋದೆ ಮಠಕ್ಕೆ ಸಂಬಂಧಿಸಿದ ಕೋಟೇಶ್ವರ ಹೂವಿನಕೆರೆ ಗೊಶಾಲೆಗೆ 500 ಕೆ.ಜಿ ಪಶು ಆಹಾರ ನೀಡಲಾಯಿತು. ಟೀಮ್ ಭವಾಬ್ಧಿಯ ಅಧ್ಯಕ್ಷ ಸಂತೋಷ ತಿಂಗಳಾಯ, ಉಪಾಧ್ಯಕ್ಷ ಉದಯ್ ಬಂಗೇರ, ರವೀಂದ್ರ ತಿಂಗಳಾಯ ಸದಸ್ಯರು ಉಪಸ್ಥಿತರಿದ್ದರು.