ಬೈಂದೂರು: ಮಕ್ಕಳು ಕ್ರೀಯಾಶೀಲ ಕನಸು ಕಾಣುವಂತಾಗಬೇಕು. ಪ್ರತಿಯೊಂದರಲ್ಲಿ ತಾಯಿಯನ್ನು ಕಾಣುವ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ನಾಡಿಗೆ ಶಕ್ತಿ ಕೊಡುವ ಪ್ರಜೆಗಳಾಗಿ ರೂಪುಗೊಳ್ಳಬೇಕು. ಮಕ್ಕಳಿಗೆ ಬಾಲ್ಯದಲ್ಲಿ ದೇಶಪ್ರೇಮ ಬೆಳೆಸಬೇಕು ಎಂದು ಯುಬಿಎಸ್ ಸಮೂಹ ಶಿಕ್ಷಣ ಸಂಸ್ಥ್ಥೆಗಳ ಪ್ರಧಾನ ಕಾರ್ಯದರ್ಶಿ ಯಶಶ್ರೀ ಶೆಟ್ಟಿ ಹೇಳಿದರು.
ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಸ್ವಾತಂತ್ರೋತ್ಸವದಲ್ಲಿ ಮಾತನಾಡಿದರು. ಭಾರತ ಜಗತ್ತಿನಲ್ಲಿ ಒಂದು ಗುರುತನ್ನು ಹೊಂದಿದ್ದು, ನಮ್ಮ ಸಂವಿಧಾನ ಕೂಡ ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರು ಸ್ವಾತಂತ್ರೃದ ಅರ್ಥ ಅರಿತು ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಹೆಮ್ಮೆಯಿಂದ ಒಗ್ಗಟ್ಟಾಗಿ ಭಾರತವನ್ನು ವಿಶ್ವಗುರುವಾಗಿಸಲು ಸಂಕಲ್ಪ ಮಾಡಬೇಕು ಎಂದರು.
ನಿವೃತ್ತ ಯೋಧ ಚಂದ್ರ ಮೊಗವೀರ ಅವರನ್ನು ಸನ್ಮಾನಿಸಲಾಯಿತು. ತಾಲೂಕು, ಜಿಲ್ಲಾ ಮಟ್ಟದ ಪ್ರತಿಭೆಗಳನ್ನು ಅಭಿನಂದಿಸಲಾಯಿತು. ಲಾವಣ್ಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಇದ್ದರು. ಮುಖ್ಯಶಿಕ್ಷಕಿ ಶೋಭಾ ಡಿ.ಆಲ್ಮೇಡಾ ಸ್ವಾಗತಿಸಿದರು. ಸಹಶಿಕ್ಷಕಿಯರಾದ ಸಹನಾ ನಿರೂಪಿಸಿದರು. ಪ್ರಮಿಳಾ ವಂದಿಸಿದರು.