ವಿರಾಜಪೇಟೆ: ಕುಟ್ಟದಿಂದ ಫೆ.2ರಿಂದ 7ರವರೆಗೆ ನಡೆಯುವ ‘ನಮ್ಮ ಉಡುಪು ನಮ್ಮ ಹಕ್ಕು’ ಜಾಥಾಕ್ಕೆ ವಿರಾಜಪೇಟೆ ಸಮೀಪದ ಕಡಂಗಮೂರುರು ಗ್ರಾಮಸ್ಥರು ಬೆಂಬಲ ಘೋಷಿಸಿದ್ದಾರೆ.
ಹಿರಿಯರಾದ ಬಲ್ಲಚಂಡ ಉತ್ತಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಸ್ಥಳೀಯ ಮಹಿಳಾ ಸಮಾಜ ಸಭಾಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು.
ಗ್ರಾಮಸ್ಥರ ಪರವಾಗಿ ಮಾತನಾಡಿದ ಕೋದಂಡ ಅಯ್ಯಪ್ಪ ನಮ್ಮ ಹಾಗೂ ಹೆಣ್ಣು ಮಕ್ಕಳ ಉಡುಪು ತೊಡವು ವಿಶಿಷ್ಟವಾಗಿದ್ದು, ಅದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಆದ್ದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಅದಕ್ಕೆ ಗೌರವ ನೀಡಲೇಬೇಕು ಇದು ಹಿರಿಯರು ನೀಡಿದ ಕೊಡುಗೆಯೂ ಹೌದು. ಈ ನಿಟ್ಟಿಲ್ಲಿ ಕುಟ್ಟದಿಂದ ಅರಂಭವಾಗುವ ಜಾಥಾಕ್ಕೆ ನಾವು ಬೆಂಬಲ ನೀಡಬೇಕು. ಭಾನುವಾರ ಕುಟ್ಟಕ್ಕೆ ತೆರಳುವ ಹಾಗೂ ಫೆ .7ರಂದು ಮಡಿಕೇರಿಗೂ ನಾವೆಲ್ಲರೂ ಜತೆಗೂಡಿ ತೆರಳಿ ಬೆಂಬಲ ಸೂಚಿಸುವ ಜತೆಗೆ ಜಾಥಾ ವಿರಾಜಪೇಟೆ ಪಟ್ಟಣ ಪ್ರವೇಶ ಮಾಡುವಾಗ ಸ್ವಾಗತ ಕೋರುವುದಕ್ಕೆ ಗ್ರಾಮಸ್ಥರು ಸಮ್ಮತಿಸಿದರು.
ಗ್ರಾಮಸ್ಥರಾದ ಬಳಟಿಕಾಳಂಡ ರಂಜಿ ಮಾದಪ್ಪ, ಚೋಳಂಡ ರಮೇಶ್, ಪಳಂಗಂಡ ರಾಕೇಶ್, ಅಮ್ಮಂಡ ಶರಣು, ವಿವೇಕ್ ಹಳ್ಳಂಡ ತಮ್ಮಯ್ಯ ಮಂಡೇಪಂಡ ರೋಶನ್, ಜೋಳಂಡ ಜಯ ಚಂಗಪ್ಪ , ಚೋಳಂಡ ನಿತೀನ್, ಕಾಗೀರ ಅರ್ಜುನ , ವಿವೇಕಾನಂದ, ಬಲ್ಲಟಿಕಾಳಂಡ ಮುದ್ದಣ್ಣ ಮತ್ತಿತರರು ಉಪಸ್ಥಿತರಿದ್ದರು.