ಮುದ್ದೇಬಿಹಾಳದಲ್ಲಿ ಆಯೋಜಿಸಿದ್ದ ಯೋಗಧ್ಯಾನದ ಸಮಾರೋಪದಲ್ಲಿ ಡಾ.ಪ್ರಭುಗೌಡ ಲಿಂಗದಳ್ಳಿಯವರು ಮಾತನಾಡಿದರು. ವಿಕ್ರಮ್​ ಓಸ್ವಾಲ್​, ಕಾಮರಾಜ ಬಿರಾದಾರ, ಪ್ರಭುರಾಜ ಕಲಬುರ್ಗಿ, ನಿರಂಜನ ಸ್ವಾಮೀಜಿ, ಸಿ.ಬಿ.ಅಸ್ಕಿ, ಮಹಿಬೂಬ ಗೊಳಸಂಗಿ ಇತರರಿದ್ದಾರೆ. 
ಜಿಲ್ಲೆ

ಆತ್ಮದ ಅರಮನೆಯಾಗಲಿ ನಮ್ಮ ದೇಹ

ಮುದ್ದೇಬಿಹಾಳ: ಆರೋಗ್ಯವಂತ ದೇಹ ಆತ್ಮಕ್ಕೆ ಅರಮನೆಯಾದರೆ, ಅನಾರೋಗ್ಯವಂತ ದೇಹ ಆತ್ಮದ ಸೆರೆಮನೆಯಾಗಿದೆ. ದೈಹಿಕ ಶ್ರಮ, ಒಳ್ಳೆಯ ಆಹಾರದ ಜತೆ ಜೀವನದ ಸಂತೃಪ್ತಿಯೇ ನಿಜವಾದ ಆರೋಗ್ಯದ ಗುಟ್ಟು ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ, ನೇತ್ರ ತ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.

ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆಯಲ್ಲಿ ಯೋಗೋತ್ಸವ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಹಿಮಾಲಯನ್​ ಯೋಗಧ್ಯಾನ, ಸಾಮೂಹಿಕ ಭಜನೆ, ಆಧ್ಯಾತ್ಮಿಕ ಪ್ರವಚನ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನರು ಆಧುನಿಕತೆಯ ಮೊರೆಹೋಗಿ ಯಂತ್ರೋಪಕರಣಗಳ ಬಳಕೆಯಿಂದ ಶ್ರಮವಿಲ್ಲದ ಕಾರಣ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶ್ರಮವಯಿಸಿ ದುಡಿಯುವವರು ಆರೋಗ್ಯವಂತರಾಗಿರುತ್ತಾರೆ ಎಂಬ ಸತ್ಯ ತಿಳಿಯಬೇಕು. ದಿನದ ಒಂದು ಗಂಟೆ ಯೋಗ, ಹತ್ತು ನಿಮಿಷ ಧ್ಯಾನ, ಚಟುವಟಿಕೆಯ ಜೀವನದಿಂದ ಉತ್ತಮ ಆರೋಗ್ಯ ಸಾಧ್ಯವಿದೆ ಎಂದರು.

ಕಾಂಗ್ರೆಸ್​ ಮುಖಂಡ, ದಾಸೋಹಿ ಸಿ.ಬಿ. ಅಸ್ಕಿ ಅವರು ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವ ಮಾತು ನಿಜವಾಗಿಸುವಲ್ಲಿ ಅಡುಗೆಮನೆಯ ಉಸ್ತುವಾರಿ ಹೊಂದಿರುವ ಮಹಿಳೆಯರ ಪಾತ್ರ ದೊಡ್ಡದಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಅಧ್ಯ ಕಾಮರಾಜ ಬಿರಾದಾರ, ಮುಖ್ಯಾಧ್ಯಾಪಕ ರುದ್ರೇಶ ಕಿತ್ತೂರ ಅವರು ಮಾತನಾಡಿದರು. ನಿರಂಜನ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯ ಪ್ರಭುರಾಜ ಕಲಬುರ್ಗಿ, ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ, ತಾಲೂಕು ಕುರುಬರ ಸಂದ ಅಧ್ಯ ಅಭ್ಯುದಯ ಸೈನ್ಸ್​ ಪಿಯು ಕಾಲೇಜಿನ ಕಾರ್ಯದರ್ಶಿಗಳಾದ ಎಂ.ಎನ್​.ಮದರಿ ಮತ್ತತರರಿದ್ದರು.

ಸಂಗಮೇಶ ಶಿವಣಗಿ, ಶಿವಲಿಂಗಪ್ಪ ಹೂಗಾರ ತಂಡದವರು ಪ್ರಾರ್ಥಿಸಿ ಸಂಗೀತ ಸೇವೆ ನೀಡಿದರು. ಆರ್​.ಜಿ. ಕಿತ್ತೂರ ಸ್ವಾಗತಿಸಿದರು. ನಿವೃತ್ತ ಶಿಕ ಎಸ್​.ಎ. ಬೇವಿನಗಿಡದ ನಿರೂಪಿಸಿದರು. ಸಂಗಮ್ಮ ದೇವರಳ್ಳಿ ವಂದಿಸಿದರು.