ಚಾಮರಾಜನಗರ: ಮದ್ಯಪಾನ ಮಾಡಿ ಕೆಲಸಕ್ಕೆ ಬರುತ್ತಿದ್ದ ಸರ್ಕಾರಿ ನೌಕರನಿಗೆ ಲಿಖಿತ ಸಮಜಾಯಿಷಿ ನೀಡಲು ನೋಟೀಸ್ ಜಾರಿ ಮಾಡಲಾಗಿದೆ.
ಯಳಂದೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಸಂತೋಷ್‌ಕುಮಾರ್ ನೋಟೀಸ್ ಪಡೆದಿರುವ ನೌಕರ. ಈತ ಕಚೇರಿಗೆ ಕುಡಿದು ಬರುತ್ತಿದ್ದನೆಂದು ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ಗೆ ಯಳಂದೂರು ಸಹಾಯಕ ನಿರ್ದೇಶಕ ರಾಜೇಶ್ ದೂರು ನೀಡಿದ್ದಾರೆ.
ಇದಕ್ಕೆ ಉಪ ನಿರ್ದೇಶಕರು ನೊಟೀಸ್ ಜಾರಿ ಮಾಡಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯನ್ನು ಉಲ್ಲಂಘನೆ ಮಾಡಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲು ಇಲಾಖೆಯ ಆಯುಕ್ತರಿಗೆ ಶಿಫಾರಸ್ಸು ಮಾಡಲಾಗುವುದು. ಕೂಡಲೇ ನೀವು ಬಂದು ಲಿಖಿತವಾಗಿ ಈ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ಎಚ್ಚರಿಕೆ ನೋಟೀಸ್ ಜಾರಿ ಮಾಡಿದ್ದಾರೆ.