ಬೆಂಗಳೂರು: ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ನುರಿತ ತಜ್ಞರೊಂದಿಗೆ ಕೂದಲು, ಚರ್ಮ ಮತ್ತು ದಂತ ಚಿಕಿತ್ಸೆ ಮತ್ತು ಆರೈಕೆ ಒದಗಿಸುವ ‘ಆಸಮ್ ಎಸ್ಥೆಟಿಕ್ ಕ್ಲಿನಿಕ್’ ನಗರದಲ್ಲಿ ಆರಂಭವಾಗಿದ್ದು, ನಟಿ ಅದಿತಿ ಪ್ರಭುದೇವ ಶುಕ್ರವಾರ ಉದ್ಘಾಟಿಸಿದರು.
ಬೆಂಗಳೂರಿನ ಬಸವೇಶ್ವರನಗರ 2ನೇ ಹಂತದಲ್ಲಿರುವ ಕ್ಲಿನಿಕ್‌ನಲ್ಲಿ ನುರಿತ ಕೇಶತಜ್ಞರು, ಚರ್ಮರೋಗ ವೈದ್ಯರು ಹಾಗೂ ದಂತ ಚಿಕಿತ್ಸಕರು ಕಾರ್ಯನಿರ್ವಹಿಸಲಿದ್ದು, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿಶೇಷ ಸೇವೆ ಒದಗಿಸಲಿದ್ದಾರೆ. ಕ್ಲಿನಿಕ್‌ನಲ್ಲಿ ಲೇಸರ್ ಚಿಕಿತ್ಸೆ ಮೂಲಕ ಕೂದಲು ಆರೈಕೆ, ಪಿಆರ್‌ಪಿ ಥೆರಪಿ, ಕೂದಲು ಕಸಿ, ಕೂದಲು ಉದುರುವಿಕೆ ತಡೆಗಟ್ಟುವುದು, ಚರ್ಮಕಾಂತಿ ವರ್ಧನೆ, ಮುಖದ ಹೊಳಪು ಹೆಚ್ಚಿಸುವುದು, ಹಲ್ಲು ಬಿಳುಪುಗೊಳಿಸುವಿಕೆ ಸೇರಿ ಕೂದಲು, ಚರ್ಮ ಮತ್ತು ದಂತ ಅರೈಕೆಯಲ್ಲಿ ಸಮಗ್ರ ಚಿಕಿತ್ಸೆ ಲಭ್ಯವಿರಲಿದೆ.
ಕ್ಲಿನಿಕ್‌ನ ಸಿಇಒ ಮಾನಸಾ ಜಯರಾಮ್ ಮಾತನಾಡಿ, ಸೌಂದರ್ಯದ ಕುರಿತು ಪ್ರತಿಯೊಬ್ಬರಿಗೂ ತಮ್ಮದೇ ಆದ ಕಲ್ಪನೆ ಇರುತ್ತದೆ. ತಾನು ಹೀಗೇ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಆದರೆ ಇಂದು ಪೌಷ್ಟಿಕಾಂಶದ ಕೊರತೆಯಿಂದ ಸಣ್ಣ ವಯಸ್ಸಿನಲ್ಲೇ ಕೂದಲು ಉದುರುವಿಕೆ, ಬಿಳಿಕೂದಲು, ಕಳೆಗುಂದಿದ ಚರ್ಮ ಹೀಗೆ ನಾನಾ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಇಂತಹ ಸಮಸ್ಯೆಗಳಿಂದ ಹೊರಬಂದು ಉತ್ತಮ ಸೌಂದರ್ಯ ಪಡೆಯಲು ಉತ್ತಮ ಕ್ಲಿನಿಕ್ ಮತ್ತು ವೈದ್ಯರ ಆಯ್ಕೆ ಮಾಡಿದಲ್ಲಿ ಶೇ. 50 ಗೆದ್ದಹಾಗೆ. ಉಳಿದ ಶೇ. 50 ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಪಾಲಿಸುವುದಾಗಿದೆ ಎಂದರು.
ಈ ನಿಟ್ಟಿನಲ್ಲಿ ಆಸಮ್ ಎಸ್ಥೆಟಿಕ್ ಕ್ಲಿನಿಕ್ ಬಹು ಅನುಭವಿ ವೈದ್ಯರನ್ನು ಹೊಂದಿದ್ದು, ಇಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ ಯಶಸ್ವಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಅಮೃತ್‌ನೋನಿ ಸಿಇಒ ಎನ್. ನಾರಾಯಣ್ ಮಾತನಾಡಿ, ಯೌವನದಲ್ಲೇ ಬೊಕ್ಕತಲೆ, ಮುಪ್ಪಿನಂತಹ ಸಮಸ್ಯೆಯಿಂದ ಸಾಕಷ್ಟು ಜನರು ಖಿನ್ನತೆಗೆ ಒಳಗಾಗಿ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಆ ರೀತಿಯ ಸಮಸ್ಯೆ ಎದುರಿಸುತ್ತಿರುವವರಿಗೆ ಆಸಮ್ ಕ್ಲಿನಿಕ್ ಭರವಸೆಯ ಪರಿಹಾರ ಕೇಂದ್ರವಾಗಿದೆ ಎಂದರು.
ಕ್ಲಿನಿಕ್‌ನ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಕುಮಾರ್, ಅಮೃತ್‌ನೋನಿ ವ್ಯವಸ್ಥಾಪಕ ನಿರ್ದೇಶಕಿ ಮಂಗಳಾಂಬಿಕೆ ಇತರರು ಇದ್ದರು.
ಕೋಟ್:
ಇಂದಿನ ಕಾಲದ ಒತ್ತಡಮಯ ಜೀವನಶೈಲಿಯಿಂದಾಗಿ ಸೌಂದರ್ಯ ರಕ್ಷಣೆ ಸವಾಲುಗಳು ಎದುರಾಗಿವೆ. ಜನರು ತಮ್ಮ ಮುಖದ ಕಾಂತಿ ಹೆಚ್ಚಿಸುವ ಹೊಣೆಯನ್ನು ಮತ್ತೊಬ್ಬರಿಗೆ ನೀಡುತ್ತಾರೆ ಎಂದರೆ ಅದರ ಹಿಂದೆ ವ್ಯಕ್ತಪಡಿಸಲಾಗದ ನಂಬಿಕೆಯಿರುತ್ತದೆ. ಉತ್ತಮ ಲಿತಾಂಶದ ಮೂಲಕ ಜನರ ವಿಶ್ವಾಸಾರ್ಹತೆಯನ್ನು ಬಳಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಆಸಮ್ ಎಸ್ಥೆಟಿಕ್ ಕ್ಲಿನಿಕ್ ಗುಣಮಟ್ಟದ ಸೇವೆಯೊಂದಿಗೆ ಜನರ ಮೆಚ್ಚುಗೆ ಗಳಿಸಲಿ, ಉತ್ತಮ ಯಶಸ್ಸು ಪಡೆಯಲಿ.
-ಅದಿತಿ ಪ್ರಭುದೇವ, ಸಿನಿಮಾ ನಟಿ