ದೇವಲಾಪುರದ ಸರ್ಕಾರಿ ಹಿಪ್ರಾ ಶಾಲೆಯ ಅನಾಥ, ಏಕಪಾಲಕವುಳ್ಳ ಮಕ್ಕಳಿಗೆ ಶಿಕ್ಷಕರು ಶಾಲಾ ಬ್ಯಾಗ್ ವಿತರಿಸಿದರು. ಪ್ರಮುಖರಾದ ಎಚ್.ಪಿ.ಸೋಮಶೇಖರ, ಪೂಜಾರಿ ಈರಮ್ಮ ರಮೇಶ, ಕುರಿ ನಾಗೇಶ, ಜಿ.ಶುಭಾ, ನಾಗರಾಜ ಇತರರಿದ್ದರು. 
ಜಿಲ್ಲೆ

ಅನಾಥ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ

ನರೇಶ್ ಕುಮಾರ್

ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯ ಅನಾಥ, ಏಕಪಾಲಕವುಳ್ಳ 40 ಮಕ್ಕಳಿಗೆ ಶಿಕ್ಷಕರು ಸ್ವಂತ ಹಣದಲ್ಲಿ ಶಾಲಾ ಬ್ಯಾಗ್‌ಗಳನ್ನು ಶುಕ್ರವಾರ ವಿತರಿಸಿದರು.

ಮುಖ್ಯಶಿಕ್ಷಕ ಎಚ್.ಪಿ.ಸೋಮಶೇಖರ ಮಾತನಾಡಿ, 1ರಿಂದ 10ನೇ ತರಗತಿಯಲ್ಲಿ ಅಭ್ಯಾಸಿಸುವ ಅನಾಥ ಹಾಗೂ ತಂದೆ ಅಥವಾ ತಾಯಿ ಇಲ್ಲದ ಮಕ್ಕಳನ್ನು ಗುರುತಿಸಿ ಶಿಕ್ಷಕರಾದ ಮಹಮ್ಮದ್ ಶೋವಿಯಲ್, ಗೀತಾ ಮತ್ತು ಸ್ನೇಹಿತರು ಸೇರಿಕೊಂಡು 40 ಬ್ಯಾಗ್‌ಗಳನ್ನು ವಿತರಿಸಿ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ನೆರವಾಗಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷೆ ಪೂಜಾರಿ ಈರಮ್ಮ ರಮೇಶ, ಎಸ್ಡಿಎಂಸಿ ಅಧ್ಯಕ್ಷ ಕುರಿ ನಾಗೇಶ, ಮುಖ್ಯಶಿಕ್ಷಕಿ ಜಿ.ಶುಭಾ, ಶಿಕ್ಷಕರಾದ ನಾಗರಾಜ, ಬಸವರಾಜ, ಬ್ರಹ್ಮಾನಂದ, ಗೌತಮ್, ಉಮೇಶ, ವಿರೂಪಾಕ್ಷಿ, ಮಲ್ಲಪ್ಪ, ಜ್ಯೋತಿ, ಗಿರಿಜಾ, ರಾಗಶ್ರೀ, ಕವಿತಾ, ಹೊನ್ನೂರುಬೀ, ಸೌಜನ್ಯ ಇದ್ದರು.